ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/94

ಈ ಪುಟೊದ ಪರಿಶೀಲನೆ ಆತ್‍ಂಡ್

ತಯಾರುಮಾಡುತ್ತಿದ್ದವರು ಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದವರು. 1868 ರಲ್ಲಿ ಕ್ರೈಸ್ತ ಸಭಾ ಪತ್ರವೆಂಬ ಪತ್ರಿಕೆ ಪ್ರಕಟವಾಗುತ್ತಿತ್ತು.

ಕ್ರಿ.ಶ. 1843ರಿಂದು ಸುಮಾರು 40 ವರ್ಷಗಳವರೆಗೆ ಹೊರಟ ಕನ್ನಡ ಪತ್ರಿಕೆಗಳು ಕೇವಲ 25, ಅವುಗಳ ಪ್ರಸಾರವೂ ಕೂಡಾ ನೂರರಿಂದ ಐನೂರು ಮಾತ್ರ. ಸಂಪಾದಕ, ಅಥವಾ ಸಂಪಾದಕೀಯ ಬರೆಯುವ ಕ್ರಮವಿರುತ್ತಿರಲಿಲ್ಲ. ಅಗ್ಗದ ಜನಪ್ರಿಯತೆಯನ್ನು ಹೊಂದುವ ಉದ್ದೇಶ ಅವರಿಗಿರಲಿಲ್ಲ. ಬದಲಿಗೆ ಅವರದು ಲೋಕಶಿಕ್ಷಣದ ಗುರಿ, ಲೌಕಿಕ ವಿಷಯಗಳ ಮತ್ತು ಪ್ರಪಂಚದ ಅಗುಹೋಗುಗಳ ಪರಿಚಯ ಮಾಡಿಕೊಟ್ಟು ಅವರ ತಿಳುವಳಿಕೆಯನ್ನು ಹೆಚ್ಚಿಸಬೇಕು ಎಂಬುದೇ ಅವರ ಉದ್ದೇಶವಾಗಿತ್ತು. ಕತೆಗಳು ಪ್ರಕಟವಾಗುತ್ತಿದ್ದರೂ ಅವುಗಳ ಉದ್ದೇಶ ನೀತಿ ಬೋಧೆಯೇ ಅಗಿತ್ತು.

1886ರಲ್ಲಿ ಉಡುಪಿಯಿಂದ ಮಾಸ ಪತ್ರಿಕೆ ಸುದರ್ಶನ. 15 ವರ್ಷಗಳ ಕಾಲ ಮುನ್ನಡೆದಿದೆ. 1895 ರ ಒಂದು ಪತ್ರಿಕೆಯಲ್ಲಿ ಕ್ರೈಸ್ತ ಧರ್ಮ ಪ್ರಚಾರವು ಹಿಂದೂ ದೇಶದಲ್ಲಿ ಪ್ರಬಲವಾದಾಗ ಈ ಪ್ರಚಾರಗಳಿಗೆ ಉತ್ತರವೆನ್ನುವಂತೆ "ಪುನರುತ್ಥಾನವಾಗುವ ಹಿಂಧೂ ಧರ್ಮವೂ, ಮಿಶನರಿಗಳ ಸಾಹಸವೂ ಎಂಬ ಲೇಖನವೊಂದು ಪ್ರಕಟವಾಗಿತ್ತು.

1905 ಕೃಷ್ಣ ಸೂಕ್ತಿ ಮಾಸ ಪತ್ರಿಕೆ ಉಡುಪಿಯಿಂದ, ಪ್ರಕಟವಾಗುತ್ತಿತ್ತು. ಇದು ಬೇರೆ ಬೇರೆ ವಿಷಯಗಳ ಲೇಖನಗಳನ್ನು ಪ್ರಕಟಿಸುತ್ತಿದ್ದರೂ ಇದು ಧಾರ್ಮಿಕ ಪತ್ರಿಕೆಯಾಗಿತ್ತು.

ಕನ್ನಡದಲ್ಲಿ ಮೊತ್ತ ಮೊದಲ ದಿನ ಪತ್ರಿಕೆ ಸೂರ್ಯೋದಯ ಪ್ರಕಾಶಿಕಾ ಆರಂಭವಾದದ್ದು 1888ರಲ್ಲಿ. ಅದು ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. ಸಂಪಾದಕರು ಬಿ. ನರಸಿಂಹ ರಾವ್, ಸ್ವಲ್ಪ ಕಾಲದ ಮೇಲೆ ಇದು ವಾರ ಪತ್ರಿಕೆಯಾಯಿತು. ಆ ಮೇಲೆ ಬೆಂಗಳೂರಿಗೆ ವರ್ಗವಾಯಿತು.

ಸತ್ಯದೀಪಿಕೆ 1896ರಿಂದ ಪ್ರಕಟವಾಗುತ್ತಿತ್ತು. ಇದು ಕ್ರೈಸ್ತ ಸಭಾ ವಾರ್ತೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಯಾಗಿದ್ದರೂ ದೇಶಿಯ ಬರಹಗಾರರ ಬರವಣಿಗೆಗಳು ಈ ಪತ್ರಿಕೆಯಲ್ಲಿ ಈ ಪತ್ರಿಕೆಯಲ್ಲಿ ಬರುತ್ತಿತ್ತು. 1905ರ ಸುಮಾರಿಗೆ ಪಂಜೆ ಮಂಗೇಶರಾಯರು ಹರಟೆಮಲ್ಲ ಶೀರ್ಶಿಕೆಯಡಿ ಜಿಲ್ಲೆಯ ಹಲವಾರು ವಿಷಯಗಳ ಲೇಖನಗಳನ್ನು ಬರೆಯುತ್ತಿದ್ದರು.

ಇಲ್ಲಿನ ಪತ್ರಿಕೋದ್ಯಮಿಗಳು ತಮ್ಮ ಜಿಲ್ಲೆಯನ್ನು ಬಿಟ್ಟು ಬೇರೆ ಕಡೆ ಹೋಗಿಯೂ ಹೆಸರು ಮಾಡಿರುವರು. ಬೆನಗಲ್ ಶಿವರಾಯ, ಆರ್. ಕೆ. ಪ್ರಭು, ಡಿ.

82

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು…