ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/90

ಈ ಪುಟೊದ ಪರಿಶೀಲನೆ ಆತ್‍ಂಡ್

ಯನ್ನು ಒಂದು ಕಡೆ ಪ್ರಗತಿ ಮನೋಭಾವವುಳ್ಳ ರಾಜಕೀಯ ಪಕ್ಷದವರಿಗೂ ಸಂಸ್ಥಾನದ ಸರಕಾರಕ್ಕೂ, ಮತ್ತೊಂದು ಕಡೆ ರಾಷ್ಟ್ರನಾಯಕರಿಗೂ ಬ್ರಿಟಿಷ್ ಸರ್ಕಾರಕ್ಕೂ ಸ್ನೇಹ ಸೌಹಾರ್ಧವನ್ನು ಬೆಳೆಸುವ ಸಾಧನವನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದೇವೆ. ಪ್ರಚಲಿತ ವಿಷಯಗಳನ್ನು ಕುರಿತು ಮಹಾಜನರೇ ನ್ಯಾಯಬದ್ಧವಾದ ತೀರ್ಮಾನಕ್ಕೆ ಬರಲು ಆಯಾ ವಾರದ ಸುದ್ದಿಗಳನ್ನು ಖರಾರಾಗಿಯೂ ಎಲ್ಲರಿಗೂ ಸುಲಭವಾಗಿ ತಿಳಿಯುವಂತೆಯೂ ಪ್ರಕಟಿಸುವುದೇ ನಮ್ಮ ಧ್ಯೇಯವಾಗಿದ್ದಿತು. ನಮ್ಮ ವಾಚಕರು ಇದುವರೆಗೆ ನಮಗೆ ಕೊಟ್ಟಿರುವ ಪ್ರೋತ್ಸಾಹಕ್ಕಾಗಿಯೂ ತೋರಿರುವ ಸಹತಾಪಕ್ಕಾಗಿಯೂ ನಾವು ಅವರೆಲ್ಲರಿಗೂ ಹೃತ್ತೂರ್ವಕವಾದ ವಂದನೆಗಳನ್ನರ್ಪಿಸುತ್ತೇವೆ.”

ಕನ್ನಡ ಪತ್ರಿಕೋದ್ಯಮ ಚರಿತ್ರೆಯನ್ನು ಆರಂಭ, ಮಧ್ಯಕಾಲೀನ, ಆಧುನಿಕ ಹೀಗೆ ಮೂರು ವಿಭಾಗಗಳಾಗಿ ವಿಂಗಡಿಸಿ ಅಧ್ಯಯನ ಮಾಡಬಹುದು. ಆಧುನಿಕ ವಿಭಾಗದ ಪತ್ರಿಕೆಗಳು ತಂತ್ರಜ್ಞಾನವನ್ನು ಬಳಸಿಕೊಂಡು ಮುದ್ರಣಗೊಂಡು ತಂತ್ರಜ್ಞಾನದ ಮೂಲಕವೇ ದಾಖಲೀಕರಣಗೊಂಡಿದೆ. ಆದರೆ ಮೊದಲ ಎರಡು ವಿಭಾಗಗಳ ಪತ್ರಿಕೆಗಳ ಸ್ವರೂಪ, ಚರಿತ್ರೆಗಳನ್ನು ಅಭ್ಯಸಿಸಲು ಬೆರಳೆಣಿಕೆಯ ಪತ್ರಿಕೆಗಳು ಮಾತ್ರ ಸಿಗುತ್ತವೆ. ಯಾಕಂದರೆ ನಮ್ಮಲ್ಲಿ ದಾಖಲೀಕರಣ ಮಾಡುವ ಹವ್ಯಾಸವೇ ಇಲ್ಲವೋ ಎಂಬಂತಿದೆ. ಹಲವು ಪತ್ರಿಕೆಗಳ ಸಮಗ್ರ ಸಂಶೋಧನೆ ನಡೆದು ಅನೇಕ ಕೃತಿಗಳಾಗಿವೆ. ಕನ್ನಡ ಪತ್ರಿಕಾ ಸೂಚಿಯೊಂದು ಡಾ ಹಾವನೂರರಿಂದ ಸಂಗ್ರಹಗೊಂಡು ಪ್ರಕಟಗೊಂಡು ಇಷ್ಟು ಪತ್ರಿಕೆಗಳು ನಮ್ಮ ಕನ್ನಡದ್ದಾ ಎಂದೆನಿಸುತ್ತದೆ. ಇಂತಹ ಕಾರ್ಯಗಳನ್ನು ಮಾಡಬೇಕಾದರೆ ನಮ್ಮಲ್ಲಿ ದಾಖಲೀಕರಣದ ಮನಸ್ಸು ಮೂಡಿ ಬರಬೇಕು. ಇದಕ್ಕಾಗಿ ಪತ್ರಿಕಾ ಅಕಾಡೆಮಿ, ವಿಶ್ವವಿದ್ಯಾಲಯಗಳು ಮುಂದೆ ಬರಬೇಕಾಗಿದೆ. ಮೊದಲಿನದ್ದೆಲ್ಲ ಬೇಡ ಈಗ ಮಾಡುವುದೇ ಸರಿ, ಈಗ ಹೊಸ ಯುಗ ಅನ್ನುವವರೂ ಇದ್ದಾರೆ. ಹೊಸ ಯುಗ ಸರಿ ಆದರೆ ಸಂಶೋಧನೆ ಮಾಡಬೇಕಾದರೆ ಹಳೆಯದು ಬೇಕೇಬೇಕು. ಆಗ ಮಾತ್ರ ಹಳೆಯದಿದ್ದರೆ ಹೊಸತು ಸಾಧ್ಯ ಎನ್ನುವ ಅರಿವು ನಮಗಾಗುತ್ತದೆ. ಅದ್ದರಿಂದ ಹಳೆಯ ಪತ್ರಿಕಾ ಸಾಹಿತ್ಯದ ಚರಿತ್ರೆಯ ದಾಖಲೀಕರಣಕ್ಕೆ ನಾವೆಲ್ಲ ಕೈ ಜೋಡಿಸೋಣ.

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

-