ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/83

ಈ ಪುಟೊನು ಪ್ರಕಟಿಸದ್ ಆಂಡ್

published in the Canarese Almanac(Mangalore) from 1868 to 1874, ನಮೂದಿಸಲಾಗಿದೆ ಈ ಕೃತಿಯಲ್ಲಿ ವೃಕ್ಷಾದಿಗಳ ಕನ್ನಡ, ತುಳು, ಕೊಂಕಣಿ ಹಾಗೂ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಸಂಸ್ಕೃತ, ತಮಿಳು, ತೆಲುಗು, ಹಿಂದುಸ್ಥಾನಿ, ಭಾಷೆಗಳ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಲಿಪ್ಯಂತರ ಮಾಡಿ ಕೊಡಲಾಗಿದೆ (transliterated) ಬೇರೆ ಬೇರೆ ಭಾಷೆಗಳ ಹೆಸರುಗಳನ್ನು ಬಳಸಲು ಹಲವರ ಸಹಾಯವನ್ನು ಪಡೆದಿದ್ದು ಜಿಲ್ಲೆಯ ಭಾಷೆಗಾಗಿ ಮಂಗಳೂರಿನ ತಿಯೋಲಾಜಿಕಲ್ ಸೆಮಿನರಿಯ ಪ್ರಾಧ್ಯಾಪಕರಾದ ಶ್ರೀ ಕ್ರಿಸ್ತಾನುಜ ವಾತ್ಸ ಮತ್ತು ಗವರ್ನಮೆಂಟ್ ಕಾಲೇಜಿನ ಸಂಸ್ಕೃತ ಪಂಡಿತರಾದ ಶ್ರೀ ಪಿ. ಬಾಲಪ್ಪ ಎಂಬುವರ ಸಹಾಯವನ್ನು ಪಡೆದಿದೆ ಎಂದು ನಮೂದಿಸಲಾಗಿದೆ. ಮೊದಲ ಮುದ್ರಣದಲ್ಲಿ 500 ವೃಕ್ಷಾದಿಗಳ ವರ್ಣನೆ ಇದ್ದರೆ ಇನ್ನೆರಡು ಅವೃತ್ತಿಗಳಲ್ಲಿ 523 ವೃಕ್ಶಾದಿಗಳ ವರ್ಣನೆ ಇದೆ. ಇದೇ ಪುಸ್ತಕ 1918ರಲ್ಲಿ ಶ್ರೀ ಬಿ. ಜೆ. ಪೊನ್ನನ್ ಎಂಬವರಿಂದ ಮಲಯಾಳಂ ಭಾಷೆಗೆ ತರ್ಜುಮೆಗೊಂಡು ಪ್ರಕಟಗೊಂಡಿದೆ. 156 ವರ್ಷಗಳ ಹಿಂದೆ ಪ್ರಾರಂಭವಾಗಿ 83 ವರ್ಷಗಳ ನಿರಂತರವಾಗಿ ಪ್ರಕಟಗೊಳ್ಳುತ್ತಿದ್ದ ಪಂಚಾಂಗವುತಿಥಿ ವಾರಗಳನ್ನು ಮಾತ್ರವೇ ಜನಸಾಮಾನ್ಯರಿಗೆ ತಿಳಿಸಿಲ್ಲ. ವರ್ತಮಾನ, ಚರಿತ್ರೆ,ಚಿಂತನೆ, ಮಾರ್ಗದರ್ಶನ, ನಿಯಮಗಳು, ಆಜ್ಞೆಗಳು, ಮುಂತಾದ ಎಲ್ಲವನ್ನು ಎಲ್ಲರಿಗಾಗಿ ತಿಳಿಸಿದೆ. 150 ವರ್ಷಗಳ ಹಿಂದಿನ ಬದುಕಿನ ಸ್ಕೂಲ ಚಿತ್ರಣಗಳನ್ನು ದಾಖಲೀಕರಿಸಿದ ಪಂಚಾಂಗ ಸಂಶೋಧನಾಸಕ್ತರಿಗೆ ಯೋಗ್ಯ ವಿಚಾರ ಎನ್ನುವುದಕ್ಕೆ ಸಂಶಯವೇ ಇಲ್ಲ.

ವ್ಯಾವಸಾಯಿಕ ಪಂಚಾಂಗ 1910

ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ವ್ಯಾವಸಾಯಿಕ ಪಂಚಾಂಗ ಎಂದು ಕರೆಯಲ್ಪಡುವ ಒಂದು ಪಂಚಾಂಗ ಮುದ್ರಣಗೊಳ್ಳುತ್ತಿತ್ತು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸಾಯ ಸಂಘದವರು ಪ್ರಕಟಿಸುತ್ತಿದ್ದರು 1910ರಲ್ಲಿ ಪ್ರಕಟವಾದ ಪಂಚಾಂಗದಲ್ಲಿ ವರ್ಷದ 12 ತಿಂಗಳುಗಳ ಪಂಚಾಂಗವಲ್ಲದೆ ಕೃಷಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳಿವೆ. ಮದ್ರಾಸ್ ಸಂಸ್ಥಾನದ ಸೆಂಟ್ರಲ್ ಎಗ್ರಿಕಲ್ಬರಲ್ ಕಮಿಟಿ ಎಂಬ ಕೃಷಿಯ ಮುಖ್ಯ ಸಂಘದ ವಿವರಗಳು, ಜಿಲ್ಲಾ ವ್ಯವಸಾಯ ಸಂಘದ ವಿವರಗಳು, ಮ.ರಾ.ರಾ.ಸ.ಲ. ಮತ್ತಾಯಸರು ತನ್ನ ವಾಸಸ್ಥಾನವಾದ ಕಾರ್ಕಳದಲ್ಲಿ 1908ನೇ ಇಸವಿಯಲ್ಲಿ ಬಂಕುಭತ್ತದ ಸಾಗುವಳಿಯನ್ನು ಪರೀಕ್ಷಾರ್ಥವಾಗಿ ನಡಿಸಿದುದರ ಫಲದ ಪಟ್ಟಿ, ಕೃಷಿಯ ಫಲವನ್ನು ವೃದ್ಧಿಸುವ ಏರ್ಪಾಡುಗಳು ಮತ್ತು ಕೃಷಿಗಾರರಿಗೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.......71