ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/80

ಈ ಪುಟೊನು ಪ್ರಕಟಿಸದ್ ಆಂಡ್

1873 ಒಟ್ಟು ಪುಟಗಳು 72. ಒಂದು ತಿಂಗಳಿಗೆ ಒಂದು ಪುಟದಂತೆ 12 ಪುಟಗಳಲ್ಲಿ ಪಂಚಾಂಗ, ಇದರಲ್ಲಿ ಆಂಗ್ಲ, ಚಾಂದ್ರಮಾನ, ನಕ್ಷತ್ರ ಸೌರಮಾನ ಮಹಮ್ಮದಿ ಹೀಗೆ ಐದು ಕಾಲಂಗಳಿವೆ. ಉಳಿದ ಪುಟಗಳಲ್ಲಿ 1892ನೇ ಇಸವಿಯಲ್ಲಿ ನಡೆದ ಮುಖ್ಯ ಸಂಗತಿಗಳು, ಕನ್ನಡ ಮಲಯಾಳ ಜಿಲ್ಲೆಗಳಲ್ಲಿಯೂ ಕೊಡಗದಲ್ಲಿಯೂ ಸಿಕ್ಕುವಂಥ ವೃಕ್ಷಾದಿಗಳ ವರ್ಣನೆ ಧಾರಾವಾಹಿಯಾಗಿ ಗೆರ್ಮಾನ ಪಂಡಿತರ ಸ್ತೋತ್ರ, ಅದೃಷ್ಟವಾದಿಗಳ ಗತಿಯು, ಜನರಲ್ ಸ್ಟಾಂಪು ಅಕ್ಟ್, ಟಪ್ಪಾಲಿನ ವಿಷಯವಾದ ಮುಖ್ಯ ಕಟ್ಟಳೆಗಳು, ಸಾಕ್ಷ್ಯ ನ್ಯಾಯವನ್ನು ಕುರಿತ ಕಾನೂನು, ಸೂರ್ಯ ಚಂದ್ರ ಗ್ರಹಣಗಳು, ಪಕ್ಷಿಗಳ ಕೂಗು (ಕತೆ) ಕೋಷ್ಟಕ, 1873ನೇ ವರುಷದಲ್ಲಿ ಬರುವ ಹಬ್ಬಗಳು ಎಂಬ ಉಪಯುಕ್ತ ಮಾಹಿತಿ ಲೇಖನಗಳಿರುತ್ತಿತ್ತು.

1890 ಒಟ್ಟು ಪುಟಗಳು 65. ಒಂದು ತಿಂಗಳಿಗೆ ಎರಡು ಪುಟಗಳಂತೆ 24 ಪುಟಗಳಲ್ಲಿ ಪಂಚಾಂಗ, ಮೊದಲ ಪುಟದಲ್ಲಿ ಮೇಲೆ ತಿಳಿಸಿದಂತೆ 5 ಕಾಲಂಗಳು ಇನ್ನೊಂದು ಪುಟದಲ್ಲಿ ಸೂರ್ಯ, ಚಂದ್ರ, ಕುಜಾದಿ ಪಂಚಗ್ರಹ ಉದಯೋಚ್ಚಾಸ್ತಮಯಗಳನ್ನು ತೋರಿಸುವಪಟ್ಟಿ ಹೀಗೆ 3 ಕಾಲಂಗಳಿವೆ. ಮುಂದಿನ ಪುಟಗಳಲ್ಲಿ 1890ನೇ ಇಸವಿಯಲ್ಲಿ ಸಂಭವಿಸುವ ಗ್ರಹಣಗಳು, ವರ್ತಮಾನಸಂಗ್ರಹ, ನ್ಯಾಯಾದೀಶನ ಪರೀಕ್ಷೆ, ಅನ್ಯಾಯದ ಹಣವು, ದಕ್ಷಿಣ ಹಿಂದುಸ್ಥಾನದಲ್ಲಿ ರೂಢಿಯಾಗಿ ಎಣಿಸುವ ಶಕಗಳ ಮೊಕಾಬಿಲೆ ಪಟ್ಟಿ, ನಾಸ್ತಿಕರು ಯಾರು. ಅತಿಶಯ ಪ್ರೀತಿಯು, ಠಸೇ ತೀರ್ವ-ದಸ್ತಾವೇಜಿನ ವಿವರಣೆ, ಟಪ್ಪಾಲಿನ ವಿಷಯ ಮುಖ್ಯ ಕ್ರಮಗಳು, ದಕ್ಷಿಣ ಕನ್ನಡ ಜಿಲ್ಲೆಯ ಸರಕಾರ ಉದ್ಯೋಗಸ್ಥರು. 1890ನೆ ವರ್ಷದ ಹಬ್ಬಗಳು(ಕೈಸ್ತರ ಹಬ್ಬಗಳು, ಮಹಮ್ಮದಿಯರ ಹಬ್ಬಗಳು, ಹಿಂದು ಜನರ ಹಬ್ಬಗಳು, ಇತರ ರಜಾದಿನಗಳು)28-31 ದಿವಸಗಳಿರುವ ಪ್ರತಿ ತಿಂಗಳಿಗೆ 1 ರೂ ಆಣೆಯಿಂದ 500 ರೂಪಾಯಿವರೆಗೆ ಸಂಬಳ ಇರುವವರಿಗೆ ಪ್ರತಿ ಒಂದು ದಿವಸಕ್ಕೆ ಏನು ಬೀಳುತ್ತದೆಂಬದನ್ನು ತೋರಿಸುವ ಪಟ್ಟಿ ಹೀಗೆ ಉಪಯುಕ್ತ ಮಾಹಿತಿಗಳಿವೆ.

1892– ದಸ್ತಾವೇಜಿನ ವಿವರಣೆಗಳು, ರಿಜಿಸ್ತ್ರಿ ಮಾಡುವ ಬಗ್ಗೆ ರಿಜಿಸ್ಟ್ರಾರರಿಗೆ ತೆರತಕ್ಕ ಪೀಸಿನ ದರ, ಠಸೆ, ತೀರ್ವ (1869ನೇ ಇಸವಿ Iನೇ ಆಕ್ಷಿನಲ್ಲಿರುವ ಪಟ್ಟಿಯಿಂದ ಎತ್ತಿತೆಗೆದು ಸಂಕ್ಷೇಪಿಸಿದ್ದು)

1900- ಹಿಂದೂಸ್ಥಾನದ ಪ್ರತಿನಿಧಿಯಾಗಿರುವ ಬಹುಮಾನಿತ ಶ್ರೀಮತ್ ಲಾರ್ಡ್ ಕರ್ಜನ್ ದೊರೆಯವರ ಫೋಟೋ ಎರಡನೇ ಪುಟದಲ್ಲಿ ಅಲ್ಲದೆ ಅವರ

68 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...