ಬಳ್ಳಾರಿಯಲ್ಲಿ “ಕನ್ನಡ ಸಮಾಚಾರ" ಪತ್ರಿಕೆ ಮುದ್ರಣಗೊಳ್ಳಲು ಪ್ರಾರಂಭವಾಗುವುದಕ್ಕೆ ಕಾರಣವನ್ನು “ಮಂಗಳೂರು ಸಮಾಚಾರ” ಪತ್ರಿಕೆಯ ಕೊನೆಯ ಸಂಚಿಕೆಯಲ್ಲಿ ಹೀಗೆ ಬರೆದಿದ್ದಾರೆ.
ಹೋದ ವರ್ಷದ ಜುಲೈ 1ನೇ ತಾರೀಕಿನಲ್ಲಿಯೇ ಸಮಾಚಾರದ ಕಾಗದ ಮೊದಲು ಸ್ಥಾಪಿಸಲ್ಪಟ್ಟು ಕನ್ನಡ ಶೀಮೆಯಲ್ಲಿ ಪ್ರಕಟವಾಗಲಿಕ್ಕೆ ಆರಂಭವಾಯಿತು. ಮಂಗಳೂರು, ಮೈಸೂರು, ತುಮ್ಮೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊನ್ನಾವರ ಮೊದಲಾದ ಕೆಲವು ನೂರು ಮಂದಿ ಈ ಕಾಗದವನ್ನು ಈ ವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟ ಮಾಡುವಾಗ್ಗೆ ನಾವು ಮಾಡಿದ ಆಲೋಚನೆ ಈ ಕಾಲದಲ್ಲಿಯೂ ದೇಶಸ್ಥರೊಳಗೆ ನಡಿಯುವದೋ ಯೇನೋ ಎಂದು ಸ್ವಲ್ಪ ಸಂದೇಹ ಪಡುತ್ತಿದ್ದೆವು. ಈಗಲೂ ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆಯಲ್ಲಿ ಬರೆದ ವೊಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ರುಚಿಯಾಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿ ಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೇ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಿಲಿಕ್ಕೆ ನಿಶ್ಚಿಸಿದ್ದೇವೆ. ಆ ಮೇಲೆ ಕನ್ನಡ ಸೀಮೆಯ ನಾಲ್ಕು ದಿಕ್ಕುಗಳಲ್ಲಿ ಇರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಸುಲಭವಾಗಿ ವೋದಬಹುದು. ಇದಲ್ಲದೆ ಬಳ್ಳಾರಿಯಲ್ಲಿ ಆಗುವ ವರ್ತಮಾನದ ಒಂದು ಕಾಗದದಲ್ಲಿ ಸ್ವಲ್ಪ ಕಡಿಮೆ ಮೊದಲಿನ ಎರಡು ಕಾಗದದಷ್ಟು ಬರಹ ಹಿಡಿಯುವುದರಿಂದ ಹೆಚ್ಚು ವರ್ತಮಾನವನ್ನೂ, ಚರಿತ್ರೆಗಳನ್ನೂ, ವಿಧ್ಯಾಪಾಠಗಳನ್ನೂ ಬುದ್ಧಿ ಮಾತುಗಳನ್ನೂ ಬರಿಯುವುದಕ್ಕೆ ಸ್ಥಳ ಸಿಕ್ಕುವುದು. ಮುಂಚಿನ ಕಾಗದ ಕ್ರಯವು ಒಂದು ದುಡ್ಡಾಗಿತ್ತು. ಇದು ಹೊರ್ತು ಕಾಗದಗಳನ್ನು ತೆಗೆದುಕೊಳ್ಳುವವರು ಟಪ್ಪಾಲು ದಸ್ತುರಿ ಕೊಡಬೇಕಾಗಿತ್ತು. ಇನ್ನು ಮುಂದೆ ಒಂದೊಂದು ಕಾಗದಕ್ಕೆ ಎರಡು ದುಡ್ಡು ಕ್ರಯಮಾಡಿ ನಾವೇ ಟಪ್ಪಾಲು ದಸ್ತುರಿ ಸಲ್ಲಿಸಿ ತೆಗೆದುಕೊಳ್ಳುವವರಿಗೆ ಟಪ್ಪಾಲು ದಸ್ತುರಿ ವಿನಹ ಕಳುಹಿಸುವೆವು. ಕನಾಡ ಜಿಲ್ಲೆಯಲ್ಲಿರುವವರು ಈವರೆಗೆ ಮಾಡಿದ ಪ್ರಕಾರ ವರ್ತಮಾನ ಕಾಗದದ ಕ್ರಯವನ್ನು ಮಂಗಳೂರಿನಲ್ಲಿ ನಮಗೂ ಮೈಸೂರ ರಾಜ್ಯ ಬಳ್ಳಾರಿ ಜಿಲ್ಲೆ ಮೊದಲಾದ ಸ್ಥಳಗಳಲ್ಲಿರುವವರು ಸಲ್ಲಿಸಬೇಕಾದ ಹಣವನ್ನು ಬಳ್ಳಾರಿಯಲ್ಲಿರುವ ನಮ್ಮ ಸ್ನೇಹಿತನಾದ ವಿಲಿಯಂ ತೋಯ್ಸನ್ ದೊರೆಯವರಿಗೆ ಕಳುಹಿಸಿ ಕೊಟ್ಟರೆ ಆದೀತು. ಹದಿನಾರನೇ ನಂಬ್ರದ ಕಾಗದವು ಮಂಗಳೂರಿನಲ್ಲಿ ಛಾಪಿಸಿದ ತರುವಾಯ