ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/33

ಈ ಪುಟೊನು ಪ್ರಕಟಿಸದ್ ಆಂಡ್

ನೀಡಿ ಗೌರವಿಸಿದ್ದು ಮಿಶನರಿಗಳ ಕನ್ನಡತನಕ್ಕೆ ನಾವು ಹೆಮ್ಮೆಪಡಬೇಕಾಗಿದೆ."

ಬಾಸೆಲ್ ಮಿಶನ್‌ನವರು ಮಂಗಳೂರಿಗೆ 1834ರಲ್ಲಿ ಆಗಮಿಸಿದಾಗ ಮೊದಲು ವಾಸ್ತವ್ಯವಿದ್ದ ನೀರೇಶ್ವಾಲ್ಯದಲ್ಲಿ ನಡೆಯುತ್ತಿದ್ದ ಕ್ರೈಸ್ತರ ಆರಾಧನೆ, ಪ್ರಾಥಮಿಕ ಶಾಲೆ ಮುಂತಾದುವುಗಳು ನಡೆಯುತ್ತಿದ್ದ ಪರಿಸರದಲ್ಲಿಯೇ 1841ರಲ್ಲಿ ಕಲ್ಲಚ್ಚು ಮುದ್ರಣ ಸ್ಥಾಪನೆಗೊಂಡು ನಂತರ ಫ‌ಳ್ನೀರ್ ರಸ್ತೆಯಲ್ಲಿಯಲ್ಲಿರುವ ವೈ.ಯಂ.ಸಿ.ಎ. ಕಟ್ಟಡವಿರುವ ಸ್ಥಳಕ್ಕೆ 1842ಕ್ಕೆ ಸ್ಥಳಾಂತರಗೊಂಡಿತ್ತು. ಈ ಪರಿಸರದಲ್ಲಿಯೇ 1847ರಲ್ಲಿ ಬಾಸೆಲ್ ಇವ್ಯಾಂಜಲಿಕಲ್ ತಿಯೊಲಾಜಿಕಲ್ ಸೆಮಿನರಿ ಸ್ಥಾಪನೆಗೊಂಡು 1863ಕ್ಕೆ ಪ್ರಸ್ತುತವಿರುವ ಸ್ಥಳಕ್ಕೆ ಸ್ಥಳಾಂತರಗೊಂಡು ಕರ್ನಾಟಕ ತಿಯೊಲಾಜಿಕಲ್ ಕಾಲೇಜ್ ಎಂಬ ಹೆಸರಿನಿಂದ ಕಾರ್ಯವೆಸಗುತ್ತಿದೆ. 1913ತನಕ ಇದೇ ಸ್ಥಳದಲ್ಲಿ ಪ್ರೆಸ್ ಕಾರ್ಯಾಚರಿಸುತ್ತಿದ್ದು 1913ರಲ್ಲಿ ಪ್ರಸ್ತುತ ಶಾಂತಿ ದೇವಾಲಯವಿರುವ ಎದುರಿನ ಸ್ಥಳಕ್ಕೆ ನೂತನ ವಿಶಾಲ ಕಟ್ಟಡವನ್ನು ಹೊಂದಿ ಸ್ಥಳಾಂತರಗೊಂಡಿತು ಈ ಬಗ್ಗೆ ಮಿಶನ್ ವರದಿಯಲ್ಲಿ ಈ ಉಲ್ಲೇಖವಿದೆ. Mr. Albert Beierbach who is in charge of our Printing Press had the satisfaction of seeing the new building finished without any accident; and thought the superintending of the large construction and the installation of new Diesel oil engine and other work corrected the new building joy of seeing everything satisfactorily completed was all the greater. (BM Report 1914) ಇದೇ ವರ್ಷ ಪ್ರಕಟವಾದ ಕನ್ನಡ ತುಳು ಸಂಗೀತ ಪುಸ್ತಕ ಈಗಲೂ ಕರ್ನಾಟಕದಾದ್ಯಂತ ಇರುವ ಬಾಸೆಲ್ ಮಿಶನ್ ಹಿನ್ನೆಲೆಯುಳ್ಳ ಕ್ರೈಸ್ತ ಸಭೆಗಳಲ್ಲಿ ಉಪಯೋಗಿಸಲ್ಪಡುತ್ತಿದೆ. ಈ ಪುಸ್ತಕದಲ್ಲಿ 410 ಕನ್ನಡ ಹಾಗೂ 251 ತುಳು ಸಂಗೀತಗಳಿವೆ. ಪ್ರೆಸ್ ಸ್ಥಳಾಂತರವಾದಾಗ ಆ ಸ್ಥಳದಲ್ಲಿ ಬಲ್ಮಠದಲ್ಲಿ 1908ರಲ್ಲಿ ಸ್ಥಾಪನೆಯಾದ ವೈ.ಎಂ.ಸಿ.ಎ.ಕಾರ್ಯವೆಸಗುತ್ತಿದೆ. 1914 ನಡೆದ ಮಹಾಯುದ್ಧದ ಪರಿಣಾಮದಿಂದಾಗಿ ಪ್ರೆಸ್‌ನ್ನು ದೇಶಿಯ ಸಂಸ್ಥೆ ನಡೆಸುತ್ತಿದ್ದು 1927ರ ತನಕ ಅದಕ್ಕೆ ಕೇನರೀಸ್ ಇವೆಂಜಿಲಿಕ್ ಮಿಶನ್ ಪ್ರೆಸ್ ಎಂಬ ಹೆಸರಿತ್ತು. 1928 ಸುಮಾರಿಗೆ ಪ್ರೆಸ್‌ನ ಕಟ್ಟಡದ ಎದುರಿನ ಭಾಗದಲ್ಲಿ ಸ್ವಲ್ಪ ಬದಲಾವಣೆ ಮಾಡಿ ಕಛೇರಿಯಿದ್ದ ಕೊಠಡಿ ಮೇಲೆ ಮಾಳಿಗೆ ನಿರ್ಮಿಸಿ ಒಂದು ಕೊಠಡಿಯನ್ನು ನಿರ್ಮಿಸಲಾಗಿತ್ತು. ಈ ಕೊಠಡಿಯು ಬೀಸುವ ತಂಪಾದ ಗಾಳಿಯನ್ನು ಸವಿಯಲೋ ಎಂಬಂತ್ತಿದ್ದು ಈ ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಿಶನರಿಗಳು ಕೆಲಸ ನಡೆಯುತ್ತಿದ್ದ ವೇಳೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
21