ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/29

ಈ ಪುಟೊನು ಪ್ರಕಟಿಸದ್ ಆಂಡ್

ಭಾರತೀಯ ಮತ್ತು ಯುರೋಪಿಯನ್ ಭಾಷೆಗಳಲ್ಲಿ ಬಾಸೆಲ್ ಮಿಶನ್‌ನವರು ಪುಸ್ತಕಗಳನ್ನು ಹೊರತಂದರು. ಹಾಗೂ ಅವರ ಮುದ್ರಣಾಲಯವು ದಕ್ಷಿಣ ಭಾರತದಲ್ಲಿ ಅತಿ ದೊಡ್ಡದೆಂದು ಪರಿಗಣಿಸಲ್ಪಟ್ಟಿತ್ತು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿನ ಮುದ್ರಣವು ಅಂದಕ್ಕೆ ಭಾರತದ ಇನ್ನಾವುದೇ ಪ್ರೆಸ್ಸಿಗೆ ಹೋಲಿಸಿದರೆ ಅಸಮಾನವಾದುದು ಎಂದು ಅಂದಿನ ಮದ್ರಾಸ್ ಸರಕಾರವು ತನ್ನ 1875ರ ಆಡಳಿತ ಕೈಪಿಡಿಯಲ್ಲಿ (Manual of Administration 1875) ದಾಖಲು ಮಾಡಿದೆ." ಮಂಗಳೂರಿನಲ್ಲಿ 1870ರ ಸುಮಾರಿಗಿದ್ದ ಹಿಂದೂ ಪವರ್ ಪ್ರೆಸ್ ಕಲ್ಲಚ್ಚು ಮುದ್ರಣ ಮಾಡುತ್ತಿದ್ದ ದಾಖಲೆಯಿದ್ದು ಇದೊಂದು ಬಿಟ್ಟರೆ ಈವರೆಗೆ ಬಾಸೆಲ್ ಮಿಶನ್ ಪ್ರೆಸ್ ಏಕೈಕ ಮುದ್ರಣಾಲಯವಾಗಿತ್ತು. ಜಿಲ್ಲೆಯಲ್ಲಿ ನಂತರ ಸ್ಥಾಪನೆಯಾದ ಮುದ್ರಣಾಲಯಗಳು ಇಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದವರ ನೆರವನ್ನೇ ಹೆಚ್ಚಾಗಿ ಪಡೆದವುಗಳಾಗಿವೆ.

ಬಾಸೆಲ್ ಮಿಶನ್ ಪ್ರೆಸ್ ಬಗ್ಗೆ 1927ರಲ್ಲಿ ಮಂಗಳೂರಿನಲ್ಲಿ ನಡೆದ 13ನೇ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಲೇಖನವೊಂದರಲ್ಲಿ ಹೀಗೆ ಬರೆಯಲಾಗಿದೆ: "ಕಲ್ಲು ಛಾಪಾಯಂತ್ರದೊಡನೆ ಬಲು ಅಲ್ಪ ತರಗತಿಯಲ್ಲಿ ತೊಡಗಿದ ಈ ಛಾಪಖಾನೆಯು ಈಗ ನೂರಾರು ಜನರು ಉದ್ಯೋಗ ನಡೆಸುತ್ತಲಿದ್ದು ಬಲಿಷ್ಠರಾಗಿ, ಕನ್ನಡ ಜಿಲ್ಲೆಯಲ್ಲಿ ಪ್ರಕೃತ ಶೋಭಿಸುತ್ತಿರುವ ಎಲ್ಲಾ ಛಾಪಖಾನೆಗಳಿಗೆ ಸಾದೃಶವಾಗಿ ಮಾತೃಮಂದಿರದಂತೆ ಶೋಭಾಯಮಾನವಾಗಿರುವುದು.ಈ ಛಾಪಖಾನೆಯ ಮೂಲಕ ನಮ್ಮ ಜಿಲ್ಲೆಯ ಅನೇಕರು ಅಚ್ಚುಹಾಕುವ ಪರಿಪರಿಯ ಕೆಲಸಗಳಲ್ಲಿ ತರಬೇತನ್ನು ಪಡೆದುದಲ್ಲದೆ ಧನಾನುಕೂಲವುಳ್ಳವರು ಸ್ವತಂತ್ರವಾಗಿ ಛಾಪಖಾನೆಗಳನ್ನು ಸ್ಥಾಪಿಸಿಕೊಳ್ಳುವಂತೆ ಇಂಬು ದೊರೆಯಿತು. ಅನೇಕ ಕೆಲಸಗಾರರಿಗೂ ಉಪಜೀವನವನ್ನು ಕಲ್ಪಿಸಿಕೊಡುವಂತಾಯಿತು." 1870ರಲ್ಲಿ ಬಾಸೆಲ್ ಮಿಶನ್‌ ಪ್ರೆಸ್‌ನ ಚಿಹ್ನೆಯಲ್ಲಿ ತೆಂಗಿನ ಮರದ ಚಿತ್ರವಿದ್ದು ನಾಲ್ಕು ಸುತ್ತಲೂ ಕನ್ನಡ, ತುಳು, ಮಲಯಾಳಂ, ಇಂಗ್ಲಿಷ್ ಎಂದು ನಾಲ್ಕು ಭಾಷೆಗಳನ್ನು ನಮೂದಿಸಲಾಗುತ್ತಿತ್ತು.

177 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ ಪ್ರಾರಂಭವಾದದ್ದು ಮಂಗಳೂರಿನ ಇದೇ ಮುದ್ರಣಾಲಯದಲ್ಲಿ. 1843ರಲ್ಲಿ 'ಮಂಗಳೂರು ಸಮಾಚಾರ' ವೆಂಬ ಹೆಸರಿನಲ್ಲಿ ರೆವೆ. ಹೆರ್ಮನ್ ಮೋಗ್ಲಿಂಗ್‌ರವರ ಸಂಪಾದಕತ್ವದಲ್ಲಿ ಪ್ರಾರಂಭಗೊಂಡ ಕನ್ನಡ ವಾರಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ. ಈ ಪತ್ರಿಕೆಯ ಬೇಡಿಕೆ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
17