ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/22

ಈ ಪುಟೊನು ಪ್ರಕಟಿಸದ್ ಆಂಡ್

ಮೊಗ್ಲಿಂಗ್. ಇವರು 1836ರಲ್ಲಿ ಭಾರತಕ್ಕೆ ಬಂದವರು. ಮಂಗಳೂರಿನಲ್ಲಿ ಮುದ್ರಣ ವ್ಯವಸ್ಥೆ ಸ್ಥಾಪಿಸಲು ಸೂಕ್ತ ವ್ಯಕ್ತಿಯನ್ನು ಎದುರು ನೋಡುತ್ತಿದ್ದ ಇವರು ವೈಗ್ಲೆಯವರ ಜೀವನ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ. He brought with him to his India-Mission Service stores of knowledge rarely in the possession of a fresh-man from Europe, and talents of the first order.He was a very fair Latin and Greek scholar, well at home in Hebrew, had gone deep into medieval German had studied Arabic and Sanskrit under professor Ewald with much zeal and success, and had made himself acquainted with all the principal languages of Europe from Russian to Portuguese. On his arrival at Bombay in June 1840 be commenced Canarese, and looked about him in Mahrathi, Guzarathi and Hindusthani, to which afterwards Malayalam, Tulu and Tamil were added. On his landing at Mangalore on the 19th September, as above stated he found me in my room boring at Krishnamachary's Canarese Grammar.

7-6-18585ನಿಧನರಾದ ವೈಗ್ಲೆಯವರ ವಿಚಾರವಾಗಿ ಪತ್ರಿಕೆಯೊಂದರಲ್ಲಿ ಹೀಗೆ ಬರೆದಿದ್ದಾರೆ: "ಇವರು ಅಗ್ರಗಾಮಿ ಮಿಶನರಿಗಳಲ್ಲಿದ್ದ ವಿದ್ವಾಂಸರಲ್ಲಿ ಒಬ್ಬರಾಗಿದ್ದರು. ಇವರು ಆ ಕಾಲದ ವೈದಿಕ ಶಾಲೆಯ ಪ್ರೊಫೆಸರರೂ, ದೇವ ವಾಗೃಂಥವನ್ನು ಕನ್ನಡಕ್ಕೆ ಭಾಷಾಂತರಿಸಿದವರಲ್ಲಿ ಒಬ್ಬರೂ, ಇನ್ನು ಅನೇಕ ಕನ್ನಡ ಗ್ರಂಥಗಳನ್ನು ರಚಿಸಿದವರೂ ಆಗಿದ್ದರು ಇವರು ತನ್ನ ದಾಯಾದಿಯಾಗಿದ್ದ ಮಿಶನರಿ ರೆವೆ. ಮೋಗ್ಲಿಂಗ್ ದೊರೆಯವರಿಗೆ ಪ್ರೀಯನಾದ ಬಲಗೈಯಂತೆ ಇದ್ದರು". (ಕ್ರೈಸ್ತ ಹಿತವಾದಿ, 1926)

1841ರಲ್ಲಿ ಬೊಂಬಾಯಿಯಿಂದ ಕಲ್ಲಚ್ಚು ಮುದ್ರಣ ಯಂತ್ರ ತಂದಾಗ ಇಲ್ಲಿ ಮೊದಲು ಮುದ್ರಿಸಿದ್ದು ಸತ್ಯವೇದದ ಒಂದು ಭಾಗವಾಗಿರುವ ಗ್ರೇನರ್ ಎಂಬ ಮಿಷನರಿಯ ತುಳು ಭಾಷಾಂತರವಾದ 'ಮತ್ತಾಯೆ ಬರೆತಿ ಸುವಾರ್ತಮಾನ'. 1842ರಲ್ಲಿ ಮತ್ತೊಂದು ಶಿಲಾಯಂತ್ರವನ್ನು ಮದ್ರಾಸಿನಿಂದ ತರಿಸಲಾಯಿತು. ಈ ಶಿಲಾಯಂತ್ರದಲ್ಲಿ ಕೇವಲ ಧಾರ್ಮಿಕ, ಪ್ರಾಥಮಿಕ ಪಠ್ಯಗಳನ್ನು ಮಾತ್ರ ಪ್ರಕಟಿಸಿದರೆ ಜನಸಾಮಾನ್ಯರನ್ನು ಮುಟ್ಟಲು ಸಾಧ್ಯವಿಲ್ಲವೆಂದರಿತ ಮಿಶನರಿಗಳು ಇತರ ಸಾಹಿತ್ಯಗಳ ಪ್ರಕಟಣೆಗಳಿಗೂ ಮುಂದಾದರು. ಅಕ್ಷರಮಾಲೆ (1844), ಭೂಗೋಳ

10
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...