ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/183

ಈ ಪುಟೊನು ಪ್ರಕಟಿಸದ್ ಆಂಡ್

ಕ್ರಿಸ್ತ ಹುಟ್ಟಿದ ಹಬ್ಬ ಕ್ರಿಸ್ಮಸ್

ಕ್ರಿಸ್ತ ಜಯಂತಿಯು ಬಹು ಸಂತೋಷದ ಹಬ್ಬ. ಮಹಾಮಹಿಮನಾದ ದೇವರು ಮಾನವನ ರಕ್ಷಣೆಗಾಗಿ ನರವತಾರವೆತ್ತಿ ಬಂದ ಶುಭ ದಿನದ ಆಚರಣೆ. ಜಗತ್ತಿನಾದ್ಯಂತ ಈ ಹಬ್ಬವನ್ನು ಜನರೆಲ್ಲರೂ ಆಚರಿಸುತ್ತಾರೆ. ಮಕ್ಕಳು ದೊಡ್ಡವರೂ ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್ತ ಜಯಂತಿಯ ಸಂತೋಷದಲ್ಲಿ ಪಾಲುದಾರರಾಗುತ್ತಾರೆ.

ಕ್ರಿಸ್ಮಸ್ ಎಂಬ ಪದ ಕ್ರೈಸ್ಟ್ ಮಾಸ್‌ (ಕ್ರಿಸನಿಗೆ ಸಂಬಂಧಿಸಿದ ಆರಾಧನೆ) ಇದರ ಸಂಕ್ಷಿಪ್ತ ರೂಪ. ಕ್ರಿಸ್ತನು ಹುಟ್ಟಿದ ತಾರೀಕಿನ ಬಗೆಗೆ ಹಲವು ಭಿನ್ನಾಭಿಪ್ರಾಯಗಳಿವೆ. ಕ್ರಿಸ್ತನು ಹುಟ್ಟಿ 300 ವರ್ಷಗಳ ತನಕ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ ಪುರಾವೆಗಳು ಕಂಡುಬರುತ್ತಿಲ್ಲ. ಆದರೂ ಪುರಾತನ ಸಭೆಗಳಲ್ಲಿ ಲೋಕರಕ್ಷಕನ ಜನನದ ಹಬ್ಬವನ್ನು ಆಚರಿಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕ್ರಿ.ಶ. 336ಕ್ಕಿಂತ ಮೊದಲು ರೋಮಿನ ಪೇಗನರು ಡಿಸೆಂಬರ್ 25ರಂದು ಸೂರ್ಯನ ಹಬ್ಬವನ್ನು ಅಚರಿಸುತ್ತಿದ್ದರು. ಜೂಲಿಯನ್ ಪಂಚಾಂಗದ ಪ್ರಕಾರ ಈ ತಾರೀಕಿನಂದು ಸೂರ್ಯನು ದಕ್ಷಿಣಾರ್ಧಗೋಳದ ಮಕರ ಸಂಕ್ರಾಂತಿಯಿಂದ ಉತ್ತರಕ್ಕೆ ಹಿಂದಿರುಗಲು ತೊಡಗುವನು. ರೋಮನರಿಗೆ ಇದು ಅಜೇಯನಾದ ಸೂರ್ಯನು ಹುಟ್ಟಿದ ಹಬ್ಬ. ಆದ್ದರಿಂದಲೇ ರೋಂ ಚಕ್ರವರ್ತಿ ಅರೇಲಿಯನ್ ಎಂಬಾತನು ಡಿಸೆಂಬರ್ 25ನ್ನು ಸೂರ್ಯದೇವರನ್ನು ಪೂಜಿಸುವ ದಿನ ಸೂರ್ಯದೇವನು ತನ್ನ ಚಕ್ರಾದಿಪತ್ಯದ ಪ್ರಮುಖಪಾಲಕನೆಂದು ಘೋಷಿಸಿದ ಎಂಬ ಪ್ರತೀತಿ ಇದೆ. ಸೂರ್ಯಾರಾಧನೆ ಹಲವ ಪುರಾತನ ಸಂಸ್ಕೃತಿಗಳಲ್ಲಿ ಸರ್ವೆಸಾಮಾನ್ಯ. ಕಾಲಕ್ರಮೇಣ ಕಾನ್ಸ್ಟೆಂಟೈನ್ ಚಕ್ರವರ್ತಿಯು ಕೈಸ್ತನಾದಾಗ ಈ ಎಲ್ಲಾ ಸಂಪ್ರದಾಯಗಳಿಗೆ ತೆರೆ ಬಿತ್ತು. ಆದರೆ ಜನರ ಐಕ್ಯತೆಗೆ ಹಬ್ಬಗಳು ಅನಿವಾರ್ಯವಾದ್ದರಿಂದ ಅಜೇಯ ಸೂರ್ಯನ ಹಬ್ಬದ ದಿನದ ಸ್ಥಾನವನ್ನು ಕ್ರಿಸ್ತನು ಪಡೆದ.

ಕ್ರಿಸ್ತನು ಹುಟ್ಟಿದ ದಿನಾಂಕವು ಸತ್ಯವೇದದಲ್ಲಿ ಇಂತಹದೇ ದಿನವೆಂದು ನಿಗದಿಯಾದ ದಾಖಲಾಗದೇ ಇರುವುದರಿಂದ ಕ್ರಿಸ್ತನ ಹಿಂಬಾಲಕರಾದ ಕ್ರೈಸ್ತರು ಹಲವಾರು ವರ್ಷಗಳಲ್ಲಿ ಜನವರಿ 6, ಮಾರ್ಚ್ 28, ಎಪ್ರಿಲ್ 19 ಮತ್ತು 20,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

171