ಪುಟ:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/144

ಈ ಪುಟೊದ ಪರಿಶೀಲನೆ ಆತ್‍ಂಡ್

ಮಹತ್ವದ್ದಾಗಿರುತ್ತದೆ. ಈ ವರ್ಗದಲ್ಲಿ ಬರುವ ಭಾಷೆಗಳಲ್ಲಿ 25 ಮುಖ್ಯವಾಗಿರುವವು. ಇವುಗಳನ್ನು ಆಡುವವರು ಬಹುತರ ಪ್ರಾಚೀನ ಕುಲದ ಆರ್ಯವಂಶದವರು ಆದರೆ ಕೆಲವರು ಅನಾರ್ಯಕುಲದವರೂ ಈ ಭಾಷೆಗಳನ್ನು ಬಳಸುವದುಂಟು.

ಆರ್ಯರು ಈ ದೇಶದ ಮೂಲನಿವಾಸಿಗಳಲ್ಲ: ಇವರ ಬೇರೆ ಬೇರೆ ತಂಡಗಳು ಬೇರೆ ಬೇರೆ ಕಾಲಗಳಲ್ಲಿ ಈ ದೇಶಕ್ಕೆ ಬಂದು ಒಕ್ಕಲಾಗಿ ನಿಂತವು. ಇವರೆಲ್ಲರು ಆಡುವ ಭಾಷೆಗಳು ಒಂದೇ ಜಾತಿಯದಾದರೂ ಅವುಗಳಲ್ಲಿ ಸ್ಥಳ- ಕಾಲ-ಪರಿಸ್ಥಿತಿಗಳ ಭೇದದಿಂದ ಎಷ್ಟೋ ಹೆಚ್ಚುಕಡಿಮೆಗಳಾಗಿದ್ದವು; ಆದ್ದರಿಂದ ಮೊದಲು ಬಂದ ತಂಡದವರು ಭಾಷೆಯು ಹಿಂದುಗಡೆ ಬಂದ ತಂಡದವರಿಗೆ ತಿಳಿಯುವುದು ದುಸ್ತರವಾಗುತ್ತಿತ್ತು. ವೇದ ಮಂತ್ರಗಳು ಇಂಥ ತಂಡದವರ ಭಾಷೆಗಳಲ್ಲಿಯೇ ರಚಿಸಲ್ಪಟ್ಟವು. ಅವು ಬಹುಕಾಲದ ವರೆಗೆ ಬಾಯಿಂದಲೇ ಹೇಳಲ್ಪಡುತ್ತಿದ್ದವಲ್ಲದೆ, ಗ್ರಂಥರೂಪವಾಗಿ ಬರೆಯಲ್ಪಟ್ಟಿದ್ದಿಲ್ಲ. ಪಂಡಿತರು ಈ ಭಾಷೆಗಳನ್ನು ಕೆಲವು ಗುಂಪುಗಳಾಗಿ ವಿಭಾಗಿಸುತ್ತಾರೆ; ಅವುಗಳೊಳಗಿನ ಒಂದು ಗುಂಪಿನಿಂದ ಸಿಂಧೀ, ಮರಾಠಿ, ಬಂಗಾಲಿ ಭಾಷೆಗಳಾಗಿರುತ್ತವೆಂತಲೂ ಮತ್ತೊಂದು ಗುಂಪಿನಿಂದ ಪಂಜಾಬೀ, ಗುಜರಾಥಿ, ಹಿಂದಿ ಭಾಷೆಗಳಾಗಿ ರುತ್ತವೆಂತಲೂ ಅವರು ಪ್ರತಿಪಾದಿಸುವರು; ಆದರೆ ಈ ಅರ್ವಾಚೀನಭಾಷೆಗಳು ಬಳಕೆಯಲ್ಲಿ ಬರುವುದಕ್ಕಿಂತ ಮುಂಚೆ ಬಹಳ ವರ್ಷಗಳ ಹಿಂದೆ ಅಕ್ಷರಲಿಪಿಯೂ ಲೇಖನಕಲೆಯೂ ಹುಟ್ಟಿದ್ದರಿಂದ, ಪಂಡಿತರು ಆಗ ಪ್ರಚಲಿತವಾಗಿದ್ದ ಬೇರೆ ಬೇರೆ ತಂಡದವರ ಆರ್ಯಭಾಷೆಗಳನ್ನು ಸಂಶೋಧಿಸಿ ಅವುಗಳಿಗೆ ಸಂಸ್ಕಾರ ಕೊಟ್ಟು ಒಂದು ಹೊಸದಾದ ಗ್ರಂಥಸ್ಥ ಭಾಷೆಯನ್ನು ನಿರ್ಮಾಣ ಮಾಡಿದರು. ಇದೇ ಸಂಸ್ಕೃತವು. ಆರ್ಯರು ತಾವು ಅಲ್ಲಿಯ ವರೆಗೆ ಬಾಯಿಂದಲೇ ಪಠಿಸುತ್ತ ಬಂದಿದ್ದ ವೇದಮಂತ್ರಗಳನ್ನೂ, ಬರಬರುತ್ತ ಆದ ಶಾಸ್ತ್ರ-ಪುರಾಣ-ಕಾವೈತಿಹಾಸಾದಿ ಗ್ರಂಥಗಳನ್ನೂ, ಧರ್ಮಗ್ರಂಥಗಳನ್ನೂ ಈ ಸಂಸ್ಕೃತಭಾಷೆಯಲ್ಲಿ ಬರೆದರು.ಈ ಮೇರೆಗೆ ಹಿಂದೂ ಜನರ ಧರ್ಮಗ್ರಂಥಗಳೂ, ಶಾಸ್ತ್ರ-ಸಾಹಿತ್ಯಾದಿ ಲೌಕಿಕಗ್ರಂಥಗಳೂ, ಕಾವ್ಯ-ಪ್ರಬಂಧಾದಿಗಳೂ ಸಂಸ್ಕೃತ ಭಾಷೆಯಲ್ಲಿ ಬರೆಯಲ್ಪಟ್ಟ ದ್ದರಿಂದ ಅದಕ್ಕೆ ಹಿಂದುಸ್ತಾನದ ಭಾಷೆಗಳಲ್ಲಿ ಅಗ್ರಸ್ಥಾನವು ದೊರೆತಿರುತ್ತದೆ.

ಸಾಮಾನ್ಯ ಜನರು ತಮ್ಮ ವ್ಯವಹಾರದಲ್ಲಿ ಈ ಗ್ರಂಥಸ್ಥ ಸಂಸ್ಕೃತಭಾಷೆಯನ್ನು

132

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...