ಪುಟ:ಕಯ್ಯಾರೆರ್ನ ಕಬಿತೆಲು.pdf/೮೫

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಗೆರೆ ತಪ್ಪದಿರೆ ಬರೆವೆ ಅರ್ಧ ಶತಮಾನ ದಾಂಟುತ ಬಂತು ಜೀವನದಿ; ಕಾಲು ಕೆಸರಲಿ, ಮಿಕ್ಕ ಕಾಲು ಮರಳಿನಲಿ; ಅಡಿಮೆ ಹೊಲೆ ಕೊಳೆಯಾಯಿತಾಯುಸ್ಸಿನರೆ ಬದುಕು ಬಿಡುಗಡೆಯ ಬೇಗೆಗೆ ನಿವೃತ್ತಿ ಹುಡುಕು. ಅಂದಿಗೂ ಶ್ರಮವೆ ದೈವತವೆಂದು ನೆರೆನಂಬಿ ನಿಂದವನು, ಮೇಣದರ ಬಲದ ಬದುಕಿದೆನು; ಇಂದಿಗೂ ದುಡಿತವೊಂದೇ ಹಿಡಿತವೀ ಬಾಳ ಹಂದರಕ್ಕಾಧಾರವೆಂದೆ ಬಿಡದಿಹೆನು. ನೇಗಿಲಿನ ಸಮಕೆ ಲೇಖನಿ ಹಿಡಿದ ಕಯ್ಯಲ್ಲಿ ಗೆರೆ ತಪ್ಪದಿರೆ ಬರೆವೆ ಭೂಪಟದಿ, ಪುಟದಿ; ತಲೆಯ ತೂಗಿತು ತೆನೆಯ ಭಾರದಲಿ ನವಶಾಲಿ, ಅರಳಿ ಬಂದಿತೊ ಕವಿತೆ, ಹೊಸತು ಸಂಪುಟದಿ. ಮೆಚ್ಚುಗೆಯೂ ಚುಚ್ಚುಗೆಯೊ ಬಂದದ್ದು ಬರಲಿ; ನೇಗಿಲಿನ ಜತೆಗೆ ಲೇಖನಿ ಕಯೊಳಿರಲಿ. ಕಯ್ಯಾರೆರ ಕಬಿತೆಲು / 72