ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಸಿರಿಪಟ್ಟವನೇರಿದ ನೆಲದಲ್ಲಿ, ನರಿಗಳು ನಾಯಿಗಳೋಡುತಿವೆ; ಸಿರಿವಂತರು ಬಾಳಿದ ಮನೆಯಲ್ಲಿ, ಹಾವು ಹೆಗ್ಗಣವು ಕೂಡುತಿವೆ. ಅಂದಿನ ಸಂಭ್ರಮ ವಿಪುಲವೈಭವಗ- ಳಿಂದಿಗದೆಲ್ಲವು ಬರಿ ಕನಸು! ಹಿಂದಿನ ವೀರರ ಕತೆಗಳ ನೆನೆದೇ ಕಂಬನಿ ಸುರಿಸುತಲೆದೆತಣಿಸು! ದೇಶವು ಭಾಷೆಯು ನಮ್ಮದಿದೆಂದು ಹಿಗ್ಗುವ ಕಾಲದಿ ಜನರೆಲ್ಲ; ಈ ನಾಡಿನ ಮಂದಿಯ ಹಣೆಯಲ್ಲಿ ಆ ಭಾಗ್ಯವ ವಿಧಿ ಬರೆದಿಲ್ಲ. ಕಯ್ಯಾರೆಡ್ನ ಕಬಿತೆಲು / 71