ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಈ ನಾಡು ಉತ್ತರದಲ್ಲಿ ಸೀತಾನದಿ ಗಡಿಯು, ದಕ್ಷಿಣದಲ್ಲಿ ಪಯಸ್ವಿನಿಯು, ಪೂರ್ವದ ಪಶ್ಚಿಮಗಟ್ಟವೆ ಮೇರೆ, ಪಡುವಲು ಸುತ್ತಿದೆ ಕಡಲತೆರೆ. ಈ ನಾಡನು-ತುಳುನಾಡನು, ಹಿಂದಕೆ ಆಳಿದರರಸರು ದೊರೆತನದಿ; ಅಜಿಲರು, ಚೌಟರು, ಬಂಗರು, ಬಲ್ಲಾ- ಳರು, ಸಾಮಂತರು ಮನೆತನದಿ. ವಿಟ್ಟಲ, ಕುಂಬಳೆ, ಬಾರ್ಕೂರೆನ್ನುತ ಸೀಮೆಗಳಿದ್ದುವು ಹಲವಿಲ್ಲಿ; ಸೀಮೆಗಳಾಳಿದ ರಾಜರ ಸಂತತಿ ಇಂದಿಗು ಕೆಲವಿದೆ ಹೆಸರಲಿ! ಎಲ್ಲಾ ಸೀಮೆಯನೆಲ್ಲಾ ದೊರೆಗಳು ಚಂದದೊಳಾಳಿದರೆಂದಲ್ಲ; ಆದರು, ರಾಜ್ಯದಿ ದಾನಧರ್ಮಗಳು ನೇಮನಡಾವಳಿ ಕುಂದಿಲ್ಲ; ಕಲ್ಲನು ಕೆತ್ತುತ ಜೀವವ ತುಂಬಿ ತೋರಿದರೈ ತುಳು ಶಿಲ್ಪಿಗಳು! ಸಲ್ಲಲಿತದ ಸವಿ ಪಾಡ್ಡನ ಹಾಡಿ ಉಬ್ಬಿದರೈ ತುಳುಕಬ್ಬಿಗರು. ಹಾ! ಕಾಲನ ಬೇತಾಲನ ಕುಣಿತಕೆ ಅಂದಿನರಮನೆಗಳುರುಳಿದುವು; ಕಲಸಕನ್ನಡಿಯು, ಕೋಟೆಕೊತ್ತಳವು, ಮಂದಿಮಾರ್ಬಲವು ಹೊರಳಿದವು! ಕಯ್ಯಾರರ ಕಬಿತೆಲು / 70