ಪುಟ:ಕಯ್ಯಾರೆರ್ನ ಕಬಿತೆಲು.pdf/೮೦

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ವೇದ ಬೈಬಲ್ ಧಮ್ಮಪದ ಜೈನಾಗಮವನೀ ಜೀರ್ಣಿಸಿ; ಎತ್ತಿತೋರಿದೆ ರತ್ನದಂತಹ ಕಾವ್ಯಕಥೆಗಳ ಪೂರ್ಣಿಸಿ. ಎದೆಯ ಸ್ನೇಹವನೆರೆದು ಉರಿಸಿದೆ ಕಾವ್ಯನಂದಾದೀಪವ, ಜೀವ ಕೃಷ್ಣಾರ್ಪಿತವೆಂಬೆನು ಆ ಅಭಿನ್ನದ ಭಾವವ. ಆತ್ಮನಲ್ಲಿ ಪರಮಾತ್ಮದರ್ಶನ ಕಾಂಬ ಮಹಿಮಾದೃಷ್ಟಿಯು ಅದೆ ನಿರಂತರ ನಿನ್ನ ಚಿಂತನ ಅದಕೆ ಕಾವ್ಯದ ಸೃಷ್ಟಿಯು ಸತ್ಯದನ್ವೇಷಣೆಗೆ ತೊಡಗಿ ಚರಿತೆ ಶೋಧನೆ ಮಾಡಿದೆ. ಕವಿಯ ಕಾಲದ ಕಾವ್ಯದಾಳವ ಮಥಿಸಿ ಬೋಧನೆ ನೀಡಿದೆ. ನೀನು ಪಾಂಡಿತ್ಯದ ಹಿಮಾಚಲ ಶಿಖರ - ಗೌರೀಶಂಕರ; ನಿನ್ನ ಬಣ್ಣಿಸಲೆನ್ನಳವೆ? ನಾ ಕಿರಿಯವನು ಕವಿಕಿಂಕರ. ಕವಿತೆ ಸಂಶೋಧನೆಗಳುಭಯವು ಸವ್ಯಸಾಚಿಸಿ ಸಾಗಿತು, ಆಂಗ್ಲ ಕೊಂಕಣಿ ಕನ್ನಡಗಳ ತ್ರಿವೇಣಿಸಂಗಮವಾಯಿತು. ಪದ್ಯದಲ್ಲಿಯು ಗದ್ಯದಲ್ಲಿಯು ನಿನ್ನ ಶೈಲಿಯು ನಿನ್ನದೆ; ಒಬ್ಬ ಪೈ ಮತ್ತೊಬ್ಬರಿಲ್ಲವು ಎಂಬ ಹೆಮ್ಮೆಯು ನಮ್ಮದೆ. ಕಯ್ಯಾರರ ಕಬಿತೆಲು / 67