ಪುಟ:ಕಯ್ಯಾರೆರ್ನ ಕಬಿತೆಲು.pdf/೭೯

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ರಾಷ್ಟ್ರಕವಿ ಉನ್ನತೋನ್ನತ ಪಶ್ಚಿಮಾದ್ರಿಯು ಬೆನ್ನ ಹಿಂದಕೆ ನಿಂತಿದೆ, ಅಳೆಯಲಾರದ ಆಳದಗಲದ ನೀಲಜಲಧಿಯು ಮುಂತಿದೆ. ಅತ್ತ ಗಜಶಾರ್ದೂಲ ಗರ್ಜನೆ ಇತ್ತ ಪೆರ್ದೆರೆ ಮೊರೆತವು ಇಂಥ ಮೇಳವು ರಾಗತಾಳವು ನಿನ್ನ ಸ್ಫೂರ್ತಿಗೆ ದೊರೆತವು. ಗಂಧವತಿ ಈ ಪೃಥ್ವಿ, ಕಳಮೆಯ ಕಂಪು ಹೊಲ ಸಿರಿಮಂಚವು, ತೆಂಗುಕಂಗಿನ ತೋಟ ತಲೆಯನು ತೂಗುತಿರೆ ರೋಮಾಂಚವು. ಭೂತ ನರ್ತನ, ದುಡಿಯ ವಾದನ, ಯಕ್ಷಗಾನವು ಪಾಡ್ಡನ; ನದಿ ನಿನಾದವು ಪಕ್ಷಿಕೂಜನ ನಿನ್ನ ಪ್ರತಿಭೆಗೆ ಸಾಧನ. ಕರುಣೆಯಿಂ ಕವಿತಾವತಾರವು ನಿನಗೆ ವಾಲ್ಮೀಕಿಯ ತೆರ, ದೇವಪುತ್ರನ ಶಿಲುಬೆಗಿಕ್ಕಿದ ನೋವು, ಗೋಲ್ಗೊಥದಾಕರ; ವೇಶ್ಯ ವಾಸವದತ್ತೆ ಮಸಣದಿ ಬುದ್ಧ ಭಿಕ್ಷುವನೀಕ್ಷಿಸಿ, ಕವಷ ಶೂದ್ರರ್ಷಿಯ ಮಹಾ ದಾಹಕ್ಕೆ ಸೂಕ್ತವು ಸಾಕ್ಷಿಸ ಉತ್ತಮರ ನೀಚತ್ವ ಪ್ರಕಟಿತ ತಂಗಿಯಾದಳು ಸುಗತಗಾ ಹೆಬ್ಬೆರಳ ಬಲಿದಾನದಿ; ಮಾತಂಗಿ ನಿರ್ಮಲ ಹೃದಯದಿ; ಕಯ್ಯಾರೆ ಕಬಿತೆಲು / 66