ಪುಟ:ಕಯ್ಯಾರೆರ್ನ ಕಬಿತೆಲು.pdf/೭೭

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಪರವಪಂಬದರ ನಲಿವ ನಲಿಕೆಯರ ದುಡಿಯ ಪಾಡ್ಡನಗಳಲ್ಲಿ ಭೂತ ಕೋಲ ನೇಮವು ನಡಾವಳಿ ನಡೆಯುತಿರುವ ನೆಲದಲ್ಲಿ ತುಳುವ ಸಂಸ್ಕೃತಿಯ ಸಾರ ಹೀರುತ ರಾಯ ಮಂಗೇಶ ಬಳೆದ; ಕಲಿತ ಕನ್ನಡದಿ ಕವಿತೆ ಕಟ್ಟುತ ಹೆಸರು ಕವಿಶಿಷ್ಯ ತಳೆದ.

ಪಡುವಣದ ಗಾಳಿ ಬೀಸುತ ಬಂತು ತಾಯ್ಕೆಲಕೆ, ವಿಷವುಂಡು ಕೊನೆಗೆ ಸೊದೆಗೆಳಸಿದಂತೆ; ಅಡಿಮೆ ಸಂಕಲೆ ಬಿಗಿಯೆ ಜನತೆಗಾಯ್ಕೆಚ್ಚರಿಕೆ, ಬಿಡುಗಡೆಯ ನೇಸರುದಯವ ಕಾಂಬ ಚಿಂತೆ. ಎಚ್ಚರೆಚ್ಚರವಾಯ್ತು ಕೇಳಿತ್ತುಷಾಸೂಕ್ತಿ ಕುಲಕೋಟಿ ಕಲಕಂಠ ಕೂಡಿಹಾಡಿ, ನಮ್ಮ ತಾಯ್ಯಾಡೆಂಬ ನಮ್ಮ ತಾಯ್ಯುಡಿಯೆಂಬ ಅಭಿಮಾನವನು ಮೆರೆದ ಮೋಡಿನೋಡಿ; ಆ ನವೋದಯದ ಕನ್ನಡಕುಲಕೆ ಮಂತ್ರಿಸಿದ ಋಷಿಚೇತನವು ಪಂಜೆ ಮಂಗೇಶರಾಯ; ಏನು ದಿವ್ಯ ಸ್ಪೂರ್ತಿ! ನಿನಗೆ ಸಂದಿದೆ ಕೀರ್ತಿ ನೀ ನಡೆದ ಹಾದಿಯನು ಹಿಡಿದೆವಯ್ಯ. ಸೀಮೆ ಕೊಂಕಣದ ತೆಂಕಣಗಾಳಿಯಾಟವನು ಹಾಡಿ ಕವನದ ಚಿತ್ರ ಮೋಡಿ ಮೆರೆದೆ; ಎರೆದೆ ತುಳು ಪಾಡ್ಡನದ ರಸದ ಸವಿಯೂಟವನು ಅಮರಕಥೆ ಕೋಟಿಚೆನ್ನಯವ ನಮಗೊರೆದೆ. ಕಯ್ಯಾರೆರ ಕಬಿತೆಲು / 64