ಪುಟ:ಕಯ್ಯಾರೆರ್ನ ಕಬಿತೆಲು.pdf/೭೬

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ನವೋದಯದ ಋಷಿ - ಬಂಜೆಯಲ್ಲ – ತುಳುತಾಯಿ ಪಡೆದಳು ಪಂಜೆಯಂಥ ಪುತ್ರರನು; ಕಂಡರಲ್ಲ, ಪಾಲ್ಗಡಲಿನೊಡಲೊಳು ಹರಿಯ ಹೃದಯರತ್ನವನು. ಬಂಟನಾವನೋ ಬಾಳುತ್ತಿದ್ದನು ಬದುಕ ಬೆಳಗಿಸಿದನೇನು? ಬಂಟವಾಳವೆನೆ ಹೆಸರು ಮೆರೆದಿದೆ ಅಲ್ಲೆ-ಪಂಜೆ ಜನಿಸಿದನು. ತಾಯಿ ಸೀತಮ್ಮ, ತಂದೆ ರಾಮಪ್ಪ, ಇಳಿದುಬಂದರೋ ಇಳೆಗೆ; ಮಗುವೆ ಕಣ್ಣೆಂಬೆ, ನಗುವೆ ಮೈತುಂಬೆ ಬಣ್ಣ ಮೈನಿಂಬೆ ಬೆಳಗೆ ! ಶರಧಿ ಸಹ್ಯಾದ್ರಿ ಮಧ್ಯೆ ಶಾಲಿನಿಧಿ; ಆಳ ಉನ್ನತಿ ವಿಶಾಲ; ಇಂಥ ತೊಟ್ಟಿಲಲಿ ತಾಯಿ ಜೋಗುಳಿಸೆ ಕನಸು ಕಂಡ ಕವಿ ಬಾಲ, ಗದ್ದೆ ಕಳಮೆಗಳ ಬಳಸಿ ಕೇಳಿದನು ನೇಜಿ ಹಾಡು-ಓ ಬೇಲೇ! ನಿದ್ದೆಬಿಟ್ಟು ಬಯಲಾಟ ನೋಡಿದನು ಧಿಮಿತ ಧೀಂಕಿಟದ ಲೀಲೆ ಹರಿಯುತಿಹುದು ನದಿ ನಾದ ಕಲಕಲದಿ ಜಲಧಿ ಘೋಷಕದೆ ಶ್ರುತಿಯು; ಇದನು ಆಲಿಸುತ ಹೃದಯ ತೇಲಿಸುತ ಮಯ್ಯ ಮರೆವ ಸಂಗತಿಯು, ಕಯ್ಯಾರೆಡ್ನ ಕಬಿತೆಲು / 63