ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಕವಿಯ ಕಲ್ಪನೆಯೊಂದು ಸಾಮ್ರಾಜ್ಯ ಸೃಷ್ಟಿಯಲಿ ನಿನ್ನ ರಮಣಿಯೆ ರಾಣಿ - ನೀನೆ ಸಾಮ್ರಾಟ! ಜನರ ಸೊತ್ತನು ಸುಲಿದು ದ್ರವ್ಯರಾಶಿಯ ಪಡೆದು ದುಡಿಸಿ ಸಾಯಿಸಿ ಕಟ್ಟಿಸಿದ ತಾಜಮಹಲು- ಪ್ರೇಯಸಿಯ ನೆನಹಿಂಗೆ-ಶಾಜಹಾನ್‌ದೊರೆ, ದೊರೆಯೆ ಈ ಮನೋರಮೆಯ ಮೂರ್ತಿಗೆ? ಬೆಲೆಯ ಹೇಳು? ಮರಮರವ ಕಂಡು ಕೂಗಿದ ಕಿರಾತನೆ ಹಿಂದೆ ರಾಮಾಯಣವ ಹಾಡಿ ಕವಿಯಾದನು; ದಿನದಿನವು ದೇವರಿಗೆ ಮಾಲೆಯರ್ಪಿಸಿ ಬಂದೆ ರಾಮಕಥೆ ಬರೆದೆ-ಮುಕ್ತನೆ ಎಂಬೆನು. ಕಯ್ಯಾರೆಡ್ನ ಕಬಿತೆಲು / 62