ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಸುತ್ತು ಮುತ್ತು ಕಂಪೆಲ್ಲ ಹರಡಲು ಜೀವ ಬತ್ತಿ ಉರಿದು; ಕಬ್ಬು ಹಿಂಡಿ ರಸವೆಲ್ಲ ಹೊರಡಲು ಜಗಕೆ ಸವಿಯ ಸುರಿದು. ಮನೆಯ ದುಃಖವನು ಮನದ ಮರುಕವನು ಮರೆಯೆ ಕವಿಯ ಕವನಿಸಿದೆ; ಬಾಳುವೆಯ ಕಹಿಗೆ ಭಾವನೆಯ ಸಿಹಿಯ ಸವರಿ ಸುಖವ ಸಮನಿಸಿದೆ. ಎಳತು ಮಾಮರದ ಹೊಸತು ಶಾಖೆಯಲಿ ಪಂಚಮಸ್ವರದ ಗಾನ; ಅಯ್ಯೋ! ರಣಹದ್ದು ಹೊಂಚುಹಾಕುತ ಒಯ್ಯ - ಹಾರಿತೋ ಪ್ರಾಣ. ಕೊರಳ ಮೇಲೆತ್ತಿ ಶುಭನವೋದಯವ ಸಾರಿತೊಂದು ಮುಂಗೋಳಿ; ಕಣ್ಣು ತೆರೆದು ಜನ ಕಂಡಿತೈ ಜಗವ ಜುಟ್ಟು ಕೊಯ್ದಳೋ ಕಾಳಿ ! 4 ರಸಿಕರಾಜ್ಯದ ಮನ್ನಣೆಯ ಮಣೆಯ ರಸಋಷಿಯ, ಸಪ್ತಾಕ್ಷರೀಮಂತ್ರ ಜಪಿಸಿ ಬಾಳೆ; ಎದೆಯ ಬೆಂಕಿಯ ಕಿಲುಬನು ತೊಳೆದ ಚಿನ್ನವೇ,! ಕನ್ನಡಕೆ ಹೊಸಬೆಳಕ ನೀನೆ ಬೀರ್ದೆ.! ಪದ್ಮಾವತೀ ಚರಣ ಚಾರಣಚಕ್ರವರ್ತಿಯೆನೆ ಹಿಗ್ಗಿ ಹಾಡಿದನೊಬ್ಬ ಜಯದೇವನು; ಮುದ್ದಿಸಿ ಮನೋರಮೆಯ ನೀನು ಮುದ್ದಣನಾದೆ ಪ್ರೇಮವೇ ಕಾವ್ಯಕ್ಕೆ ಜೀವವೇನು? ನಿನ್ನ ಮನವನು ಕದ್ದ ನೀನು ಕೈ ಹಿಡಿದಿದ್ದ ಆ ಮನೋರಮೆಯ ಮಾತೆನಿತು ಮಾಟ, ಕಯ್ಯಾರರ ಕಚಿತೆಲು / 61