ಪುಟ:ಕಯ್ಯಾರೆರ್ನ ಕಬಿತೆಲು.pdf/೭೨

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ನೂರು ನೂರು ಕಣ್ಣೀರು ನೂರುನೂರು ಕಣ್ಣೀರು ಹರಿಸಿದೆನು ಮತ್ತೆ ಮೈಯ ಮರೆತೆ; ನೋವೆ? ನಲಿವೆ? ನೆನೆದು ಸುರಿಸಿದೆನು, ಬೊಗಸೆ ತುಂಬಿದೊರತೆ! ಕಿರಿಯನೊಂದು ಕಾಣಿಕೆಯು ಹಿರಿಯನಿಗೆ ಬಾಷ್ಪಪುಷ್ಪವಿಡುವೆ; ಎನ್ನ ತಾಯ ಹಿರಿಗುವರ ಮುದ್ದಣಗೆ ಎರಗಿ ಕರವ ಮುಗಿವೆ. 2 ತುಳುವಬ್ಬೆಯು ಜೋಜೋ ಎನೆ ಹಾಡಿರೆ ಸಾಗರಸಂಭವ ಶ್ರುತಿಗೆ, ಕುದುರೆಮುಖವು ಶಿರವೆತ್ತುತ ನೋಡಿರೆ ನದಿಕನ್ನಿಕೆ ಪದಹತಿಗೆ ತೆಂಗಿನ ಕಂಗಿನ ತಲೆ ತೂಗಾಡಿತು ಓಬೇಲೆಯ ಪಾಡನಕ್ಕೆ; ದುಡಿತದ ಬೇನೆಗೆ ದುಡಿ ಮದ್ದಾಯಿತು ಬಡಿಯುವ ಚೋಮನ ಮನಕೆ ಆಟಿ ಕಳೆಂಜನ ಸೋಣದ ಜೋಗಿಯ ಅಂಗಣ ರಿಂಗಣ ನಲಿಕೆ. ಮೇಳದಿ ತಾಳದಿ ಭೂತದ ಕೋಲದಿ ಕುಣಿಯಿತು ನೆಲ ನಂದಳಿಕೆ ಬೀಸುಗಾಳಿಯಲಿ ಸೂಸುಮಳೆಯಲಿ ಸಿಡಿಲು ಮಿಂಚಿನಬ್ಬರವು; ಕಯ್ಯಾರೆ ಕಬಿತೆಲು / 59