ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಚಂಡಾಲ ಭಿಕ್ಷುಕಿಗೆ ಶಿಷ್ಯಪಟ್ಟವನಿತ್ತು ಮಗಳಂತೆ ಮಮತೆಯಲಿ ಸಾಕಿದಾ ಶ್ರೀ ಬುದ್ಧ ಇವಗಾಗಿ ಕೊರಗಿದ್ದ, ಕ್ರಿಸ್ತ, ಮಹಮ್ಮದ ಮತ್ತೆ ಜಿನದೇವ ಜರತುಷ್ಟ, ಪ್ಲೇಟೊ ಟಾಲಿಸ್ಟಾಯ್ ಸಾಕ್ರಟೀಸ್ ಮುಂತಾದ ಶಕಪುರುಷರೆಲ್ಲರೂ ಅಂದಿನಿಂ ಬೋಧಿಸಿದರಿಂದಿಗೂ ಇವ ಕೊರಗ! - ದೇವಸುತನೀತ ಮನುಕುಲದ ಮೂಲದ ಮನುಜ ಇವನೆ ಹರಿಜನ, ನರಜನರಿಗೆಲ್ಲ ಮೊದಲಿಗನು - ಎಂದು, ಈ ಹಿಂದುಳಿದ ಬಂಧುವನ್ನುದ್ಧರಿಸೆ ಬಂದ ಗಾಂಧಿಯು ಸಂದ ಗುಂಡಿಗಾಹುತಿಯಾಗಿ! ಆಹುತಿಗೆ ಸಂದರೂ ಇವ ನಿರಂತರ ಕೊರಗ ಆತ್ಮ ಪರಮಾತ್ಮ ತತ್ವವ ತಿಳಿಸೆ ಗೀತೆಯಲಿ ಶ್ರೀಕೃಷ್ಣ ಭಗವಂತ ಹೇಳಿದಾ ಹಿರಿ ಮಾತು ಇವನ ಕಂಡಾಗೆಲ್ಲ ಎನಗೆ ನೆನಪಾಗುವುದು 'ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನಚೈನಂ ಕೇದಯಂತ್ಯಾಪಃ ನ ಶೋಷಯತಿ ಮಾರುತಃ ಕಯ್ಯಾರೆ ಕಬಿತೆಲು / 58