ಪುಟ:ಕಯ್ಯಾರೆರ್ನ ಕಬಿತೆಲು.pdf/೬೮

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಕೋಟೆಕೊತ್ತಳಗಳೊಡೆದು, ಮಂದಿ ಮಾರ್ಬಲವ ಕಡೆದು, ಅರಿ ಶಿರ ಚೆಂಡಾಡಿದನು, ವೀರನಾರು ಹೇಳಿದನು? || 22 || ಹಾಡು ಪಾಡ್ಡನವ ಹಾಡು ಹ ಹಾ! ವೀರಕೃತಿ ಹಾಡು; ವೀರವನಿತೆಯೆನೆ ಹಾಡು, ಎದೆಯನರಳಿಸಲಿ ಹಾಡು. ಸ್ವರ್ಣ ಭೂಮಿಯಲಿ ಹರಳು ಧನ್ಯ ಜನ್ಮಕಿದೆ ಹುರುಳು, ತೌಳವಾನ್ವಯದ ತಿರುಳು, ನಿನ್ನ ಕಾಂತಿಮಯ ಕರುಳು. ಸತ್ಯಸಂಗರದ ಭಟರು, ಧೀರ ಶೂರ ತುಳುಜನರು || 23 | || 24 || ನಿನ್ನ ಕರುಳೊಳಿಡಿದಿಹರು, ವೀರಘೋಷ ಮೊಳಗುವರು || 25 || ತುಳುವ ಜವ್ವನಿಗನೊಲಿಯೆ, ಹೆಮ್ಮೆ ಹುಮ್ಮಸದಿ ನಲಿಯೆ, ಪ್ರೇಮಪುತ್ಥಳಿಯ ಪಡೆದು, ಹಿಗ್ಗಿ ಹಿಗ್ಗಿ ಸುಖ ಸವಿದು ವರ್ಷ ನಿಮಿಷದಂತಿರಲು, | 26 | ಅಯ್ಯೋ! ಜೋಡಿ ಬೇರ್ಪಡಲು; ನೊಂದು ಬೆಂದೊಡಲ ಬೆತೆಯ ಹಾಡ, ಪಾಡ್ಡನವ ಕತೆಯ! || 27 | ಹಾಡು, ಪಾಡ್ಡನವ ಹಾಡು, ಮೈಯ ಮರೆತೆಯದೊ ನೋಡು; ಕಣ್ಣನೀರನದನೊರಸು, ಕರುಣ ಕಥೆಯನಿದೆ ನಿಲಿಸು ಕಯ್ಯಾರೆ ಕಬಿತೆಲು / 55 || 28 ||