ಪುಟ:ಕಯ್ಯಾರೆರ್ನ ಕಬಿತೆಲು.pdf/೬೪

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ನುಡಿಯುತಿರುವೆಯೇನು, ಪಡುವ ಕಡಲನೊಳ್ ಬೆಡಗಿನಿಂದ? ಆಶೆ ಭಾಷೆ ಫಲಿಸಲಿ, ದೇಶ ಕೋಶ ಬೆಳಗಲಿ ಮೂಡ ಪಡುವ ತೆಂಕ ಬಡಗ ನಾಡ ನೋಡುತಿರುವ ಬೆಡಗ. ಹಾಡಲೆಂದೆ ಮನದ ಬಯಕೆ ಮಾಡಲೇನು ಮಾತು ಸಾಕೆ? ಅಂತು ವಿಪುಲ ನೀನಹ; ಇಂತು ವಿಫಲ ನಾನಿಹೆ ಜಗವ ಮೆಟ್ಟಿ ಘನತೆಯಿಂದ ಮುಗಿಲ ಮುಟ್ಟಿ ಸೊಗಸಿನಿಂದ ದಿಗಿಲುಗೊಳಿಸಿ ಮಿಗಿಸಿ ನಿಂದ ನಗವೆ, ನಿನ್ನ ಬಗೆಯ ಚಂದ 11 5 11 161 ಚೆಲುವ ರೂಪನಾಂತಿಹೆ: ಒಲಿದು ಮುಂದೆ ನಿಂತಿಹೆ | 7 | ಎನ್ನ ತುಳುವ ನಾಡ ಜಸದ ಉನ್ನತಿಯನು ತೋರುತೆಸೆದ ನಿನ್ನ ಶುಭ್ರ ಶಿಖರಕಿಂದು ಸನ್ನುತಿಯನು ಸಲಿಸಲೆಂದು ಅವಸರದಲಿ ಹಾಡಿದೆ; ಕವನ ಕಟ್ಟಿ ನೋಡಿದೆ ಕಯ್ಯಾರೆರ ಕಬಿತೆಲು / 51 || 8 ||