ಪುಟ:ಕಯ್ಯಾರೆರ್ನ ಕಬಿತೆಲು.pdf/೬೨

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ತೆರೆಗಳ ನೊರೆಗಳ ಮಾಲೆಯನ್ನೆತ್ತಿ ಒಲಿಯುತ ನಲಿಯುತ ಬಂದಳು ಸುತ್ತಿ, ಕಲಕಲ ನಾದದಿ ಹಾಡಿ ವಿನೋದದಿ ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ನವರತ್ನ ನಿಧಿಯಲ್ಲವೆ ಕಡಲು? ಪಡೆಯುವಳೇನನೋ ರಭಸದಿ ಸಾಗಲು, ಸಾಗರಸಂಗಮಕೆನಿತಿದೆ ಸಂಭ್ರಮ? ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು 11 6 11 11 7 1 ಒಳಗಡೆಯೇನೋ? ಮೊಸಳೆಯೊ? ಮಿನೊ? ತಳದಲಿ ಸೆಳೆಯುತ ಸುಳಿಯಿಹುದೇನೊ? ನಿರ್ಮಲ ನೀರೇ ಮೇಲ್ಗಡೆ ತೋರೆ! ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ಮಳೆಗಾಲದ ನೆರೆಯುಬ್ಬರವೆಲ್ಲ, ಬಿಸಿಲಿನ ಬೇಗೆಗೆ ಬತ್ತುವುದಲ್ಲ! ಹಿಗ್ಗಿದವರು ತಗ್ಗಲೆಬೇಕೆಂದೊ? ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು | 8 || 119 ಕಯ್ಯಾರೆರ ಕಬಿತೆಲು / 49