ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ನೇತ್ರಾವತಿ ಪಡುವಣ ಬುಡದಲಿ ಹುಟ್ಟಿ, ಕುದುರೆಮುಖದ ಬಂಡೆ ತಲೆ ಮೆಟ್ಟಿ. ಹಾರುತ, ಬೀಳುತ, ಕುಣಿಯುತ, ಮಣಿಯುತ ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ಎಡ ಬಲ ದಂಡೆಯ ಕೊರೆಯುತ ತಾಗಿ, ಕಲ್ಲನು ಮಣ್ಣನು ಕೊಚ್ಚುತ ಸಾಗಿ, ಎಲ್ಲಿಯು ನಿಲ್ಲದೆ, ಯಾರನು ಕೇಳದೆ, ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ಹೊಂಬಣ್ಣದ ಹೊಸ ಕಿರಣವ ಬೀರಿ, ಬಂದಿರೆ ರವಿ ಮೂಡಣ ಗಿರಿಯೇರಿ, ಸೂರ್ಯನ ಮುಂಗಡೆ ಕನ್ನಡಿ ಹಿಡಿದು ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ಸುತ್ತಲು ತುಂಬಿದ ಹೊಲಗಳಿಗೆಲ್ಲ ನೀರೆರೆಯುತ, ಫಲ ಬರಿಸುವಳಲ್ಲ. ಬೆಳೆಗಳ ಬೆಳೆಸಿ, ತೋಟವನುಳಿಸಿ, ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು ಜಳ್ಳವನಿಳಿಸುತ ಹಾಕಲು ಹುಟ್ಟು ದೋಣಿಯ ದೂಡಿರೆ ಹಾಯಿಯ ಬಿಟ್ಟು ಜನರನು ದಾಟಿಸಿ ದಡದಿಂ ದಡಕ್ಕೆ. ಹರಿವಳು ನದಿ ನೇತ್ರಾವತಿಯು; ಸಮುದ್ರರಾಜನ ಪ್ರಿಯಸತಿಯು || 1 | || 2 || 113 11 || 4 115 11 ಕಯ್ಯಾರೆರ ಕಬಿತೆಲು / 48