ಪುಟ:ಕಯ್ಯಾರೆರ್ನ ಕಬಿತೆಲು.pdf/೬೦

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ಅರಮನೆಯಾನೆಯ ಕೈಯ್ಯಲಿ, ಮಾಲೆಯ ನಿತ್ತರು ಸತ್ಯದ ನೆಲೆ ತಿಳಿದೇ! ಮಾಲೆಯನೆತ್ತುತ ಮದಗಜ ಹೊರಟಿತು, ಕೇರಿಕೇರಿಗಳನಲೆದಾಡಿ; ಲೀಲೆಯೊಳಿಕ್ಕಿತು ಪಾಂಡ್ಯನ ಕೊರಳಿಗೆ ಮಾಲೆಯನಾತನ ಗುಣ ನೋಡಿ! ಜಯಪಾಂಡ್ಯನು ಸಿರಿಪಟ್ಟದ ಕುಳಿತನು ತುಳುನಾಡಿನ ದೊರೆಯೆನಿಸಿದನು; ಯಾವೆಡೆಯಲ್ಲಿಯು ಸುಖವೆಲ್ಲೆಲ್ಲಿಯು ದಾನ ಧರ್ಮಗಳ ನಡೆಸಿದನು ಅಳಿಯನು ಮಾವನ ಸೊತ್ತನು ಪಡೆದಾ ಕತೆಯನ್ನು ಪ್ರಜೆಗಳು ಕೇಳಿದರು; ತಿಳಿದರು ಸತ್ಯವ, ಪ್ರೀತಿಯ ತತ್ತ್ವವ ಅಳಿಯಕಟ್ಟಿನೊಳೆ ಬಾಳಿದರು. ಕಯ್ಯಾರೆ ಕಬಿತೆಲು / 47