ಪುಟ:ಕಯ್ಯಾರೆರ್ನ ಕಬಿತೆಲು.pdf/೫೯

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

“ಸತ್ಯಾತ್ಮನು ಕಾಪಾಡಲಿ ಕಂದನ!” ಎನ್ನುತ ಕೊಟ್ಟಳು ಬಲಿಗಾಗಿ! ಬಂದಿತು ನಾಡಿನ ಸಂದಣಿ ಜನರದು, ನರಬಲಿಯಲ್ಲವೆ? ನೋಡಲಿಕೆ! ತಂದು ಕಠಾರಿಯನೊಂದನು ಪಾಂಡ್ಯನು ಎತ್ತಿದನಳಿಯನ ಕುತ್ತಿಗೆಗೆ “ನಿನ್ನೆ ನಿಲ್ಲೆ!! ಕೊಲದಿರು ಪಾಂಡ್ಯನೆ, ಬಲಿಯಿದು ಬಂದಂತೆನಗಾಯ್ತು! ಎಲ್ಲಾ ನಿನ್ನಯ ಸಂಪದವಳಿಯಗೆ ಸಲ್ಲಿಸೆ” ನುತ ನುಡಿ ಬಯಲಾಯ್ತು! ಕುಂಡೋದರನೆಂದೀ ನುಡಿ ಕೇಳುತ, ನಲಿದರು ಹರ್ಷದಿ ಜನರಂದು! ಪಾಂಡ್ಯನು ಬರೆದನು ಪ್ರೀತಿಗೆ ಮೆಚ್ಚುತ ಸೋದರಿ ಸುತನಿಗೆ ಸೊತ್ತೆಂದು. ಅಳಿಯನು ಮಾವನ ಮರಣದಿ ಪಡೆದನು ಮನೆ ಹಣ ಬದುಕುಗಳೆಲ್ಲವನು; ಗಳಿಸಿದ ವ್ಯಾಪಾರವ ನಡೆಸುತಲವ ಧನ ಜನ ಗುಣವನು ಕೀರ್ತಿಯನು! - ಕುಂಡೋದರ ಭೂತಕೆ ಬಲಿ ಕೊಡುವರೆ ಕೊಂಡೊಯ್ದುದ್ದರಿಂ ಭೂತಾಳ ಪಾಂಡ್ಯನೆನುವ ಹೆಸರೆತ್ತಿಯೆ ಕರೆದರು, ಮಂಡಲ ಭೂಮಿಯ ಜನರೆಲ್ಲ! 5 ಕಡಲಿನ ತೆರೆಗಳ ತುಳಿಯುತ ನರ್ತಿಪ - ಇಲ್ಲವೆ ತುಳುನಾಡಿನ ರಾಣಿ? ಹಡಗದಿ ಬಾರ್ಕೂರಲಿ ಬಂದಿಳಿದನು ಪಾಂಡ್ಯನು ನಿಜಕ್ಕೂ ಭಾಗ್ಯಮಣಿ! ಮರಣವ ಹೊಂದಿರೆ, ಬಾರ್ಕೂರಿನ ದೊರೆ, ಪಟ್ಟವನೇರಲು ಸುತರಿರದೆ; ಕಯ್ಯಾರೆ ಕಬಿತೆಲು / 46