ಪುಟ:ಕಯ್ಯಾರೆರ್ನ ಕಬಿತೆಲು.pdf/೫೮

ಈ ಪುಟೊದ ಪರಿಶೀಲನೆ ಮಲ್ತಿಜ್ಜಿ

ನಯವತಿ – ಸತ್ಯವತಿಯು, ಪತಿ ಸುತರೊಡ- ಗೂಡುತ ಬಂದಳು, ಗುಣವಂತೆ ಸೇವಕರೆಂದರು, ಮನೆಯವರೆಂದರು, ಸೋದರ ಕೊರಗುವ ಕಾರಣವ ಯಾವುದೆ ತೆರದಲಿ, ಸಲಿಸದೆ ನರಬಲಿ ಹಾಸಿಗೆ ಹಿಡಿದಿಹನೆಂದರು ತನ್ನೊಡಹುಟ್ಟಿದ ಸೋದರ ಹೃದಯವು ಮರುಗುತಲಿರುವುದ ನೋಡಿದಳು; ತನ್ನೊಡಲಿನ ಮಿದು ಕರುಳೇ ಕರಗಿತು! ಅಣ್ಣಗೆ ಬಿನ್ನಹ ಮಾಡಿದಳು - “ಏಳೆನ್ನಗ್ರಜ! ನೀನಿದಕೀಪರಿ ಮರುಗಲು ಬೇಕೇ? ಬಿಡು ಚಿಂತೆ, ಕೇಳೆನ್ನಯ ಮಗನನು ನಾವೆನು, ಭೂತಕೆ ನರಬಲಿ ಸಲುವಂತೆ.” ಸವಿಜೇನಿನ ಮಳೆ ಸುರಿದಂತಾಯಿತು ತಂಗಿಯ ನುಡಿಗಳಿವನ್ನು ಕೇಳಿ! ಬುವಿಯಲಿ ನಮ್ಮೊಡಹುಟ್ಟುಗಳಲ್ಲವೆ ಕಷ್ಟಕೊದಗುವರು ನಿತ್ಯದಲಿ? “ನನ್ನೀ ಕಾರ್ಯಕೆ ನನ್ನಯ ಸುತರನೆ ಕೈಹಿಡಿದಾಕೆಯು ಕೊಡಲಿಲ್ಲ! ನಿನ್ನೊಬ್ಬನೆ ಮಗನಿವನನು ನೀಡುವೆ ! ಭಾವ ಕೋಪಿಸನೆ? ಇದು ಸಲ್ಲ!” “ನಮ್ಮೊಳು ಭೇದಗಳಿತ್ತೇ ಸುಖದಲಿ? ದುಃಖದಿ ತೊಲಗುವೆವೇ ಹೇಳು? ಸಮ್ಮತಿ ಪಡೆದೇ ಬಂದಿಹೆ ಸೋದರ, ಉಮ್ಮಳವನು ಬಿಡು ಬೇಗೇಳು” 4 ಸತ್ಯವತಿಯು ತನ್ನಯ ಸುತ ಜಯನನು ಮೀಯಿಸಿ ತಂದಳು ಶುಚಿಯಾಗಿ; ಕಯ್ಯಾರೆ ಕಬಿತೆಲು / 45