ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ನುಡಿಯಿತು ಕುಂಡೋದರವಿದು ಭೂತವು! - ಮಾಡುವುದೇನನು ನಾನಿನ್ನು?” ಚಿಂತೆಯು ಮುಸುಕಿತು! ದುಗುಡವು ಹೆಚ್ಚಿತು, ಪಾಂಡ್ಯನು ಬಂದನು ಮನೆಗಾಗ, ಎಂತಾದರು ಬಲಿ ಕೊಡಬೇಕೆನ್ನುತ ಕರೆದವನೆಂದನು ಸತಿಗಾಗ : “ಮಕ್ಕಳು ನಮಗಿಹರೇಳುವರವರಲ್ಲಿ ಒಬ್ಬನನಿಂದಿಗೆ ಬಲಿಕೊಡುವ; ಹೊಕ್ಕಿಹ ಮಾರಿಯ ತೊಲಗಿಸದಿದ್ದರೆ ಪೀಡೆಯ ದಿನ ದಿನ ಕೊಡುವನವ “ಉಳಿದಾ ಮಕ್ಕಳಿಗಾದರು ಸುಖವಿದೆ, ಚಿಂತೆಯ ಮಾಡುವಿಯೇ ಮಡದಿ? ತಿಳಿಸೈ! ಪುತ್ರರು, ತಂದೆಗು ತಾಯಿಗು ಸಮಹಕ್ಕಿದಕೇನನು ನೆನೆದಿ?” “ಅಕಟಾ! ಪಡೆದಿ ಮಕ್ಕಳೊಳೊಬ್ಬನ ಬಲಿಕೊಡಲೆಂಬ ಮನವುಂಟೆ? ಸಕಲೈಶ್ವರ್ಯವು ಹೋದರು ಹೋಗಲಿ! ಮಗನನು ಕೊಲ್ಲಲು ಕೊಡಲುಂಟೆ? “ಇಂದೇ ಹೊರಟೆನು ನಿಮ್ಮಯ ಮನೆಯನು, ಸಿರಿ ಸೌಭಾಗ್ಯವು ಬೇಕಿಲ್ಲ; ತಂದೆಗೆ ಮಕ್ಕಳು ಭಾರವೆನಿಸಿದರು ಹೆತ್ತವಳಾನೊಪ್ಪುವಳಲ್ಲ.” ಹೆಂಡತಿಯೀಪರಿ ಖಂಡಿಸಿ ನುಡಿಯಲು, ಗಾಯಕೆ ಗೆರೆಯೆಳೆದಂತಾಯ್ತು! ಪಾಂಡ್ಯನು ದುಃಖದಿ ಹಾಸಿಗೆ ಹಿಡಿದನು ಸುದ್ದಿಯು ಮನೆ ಮನೆ ಹರಡಿತ್ತು 3 ದೇವಪಾಂಡ್ಯ ಸೋದರಿಗೀವಾರ್ತೆಯು ಮುಟ್ಟಿತು, ತನ್ನಣ್ಣನ ಚಿಂತೆ ಕಯ್ಯಾರೆರ ಕಬಿತೆಲು / 44