ಈ ಪುಟೊದ ಪರಿಶೀಲನೆ ಮಲ್ತಿಜ್ಜಿ
ಭೂತಾಳಪಾಂಡ್ಯ ಸಾವಿರ ವರ್ಷದ ಹಿಂದಕೆ ನಡೆಯಿತು ಕತೆಯೊಂದನು ಹೇಳುವೆ ಕಂದ; ಯಾವನ ಕಾಲದಿ, ಯಾತಕೆ ಹುಟ್ಟಿತು, ಅಳಿಯಕಟ್ಟೆನುತ – ತಿಳಿ ಚಂದ. - ಪಾಂಡ್ಯದೇಶದಲ್ಲಿ ವರ್ತಕನಿದ್ದನು ದೇವಪಾಂಡ್ಯ ಬಲು ಸಿರಿವಂತ; ತಂಡತಂಡದಲಿ ಹಡಗವ ಸಾಗಿಸಿ ದುಡ್ಡು ಗಳಿಸಿದನು ಗುಣವಂತ ಮನ್ನಣೆ ಸಂಪದವೆಲ್ಲವು ಹೆಚ್ಚಿತು ವ್ಯಾಪಾರದಿ ಗೆಲವಾಗುತಿದೆ; ಸಣ್ಣ ಹಡಗಗಳು ಸಾಲದೆ ಹೋಗಲು ದೊಡ್ಡದು ಕಟ್ಟಿಸೆ ಮನತೋರೆ – ಮರಗಳ ತರಿಸಿದ ಶಿಲ್ಪಿಯ ಕರೆಸಿದ ಕೂಲಿಗಳೆಲ್ಲರ ಕೂಡಿಸಿದ; ಭರದಲಿ ಹಡಗದ ಕೆಲಸವ ಮುಗಿಸಿದ, ವೆಚ್ಚವ ಗಣಿಸದೆ ಮಾಡಿಸಿದ. 2 ಕೇಳಿ ಮುಹೂರ್ತವ ಜೋಯಿಸರಲ್ಲಿಯೆ ದಿನ ತಿಥಿಯೆಲ್ಲವು ಶುಭವಿರಲು, ತಾಳುತ ಸಂಭ್ರಮ, ಸಂತಸದಲ್ಲಿಯೆ, ನೀರಿಗೆ ಹಡಗವನಿಳಿಸಿರಲು - ಆಹಾ! ಅಚ್ಚರಿ! ಏನದು ಶಬ್ದವು? ಕೇಳಿದರೆಲ್ಲರು ನಡನಡುಗಿ ! “ಓಹೋ! ನಿಲ್ಲಲಿ! ನರಬಲಿ ಸಲ್ಲಲಿ!” ದನಿಯೊಂದೆದ್ದಿತು! ಗುಡು ಗುಡುಗಿ! ಸಿಡಿಲೇ ಹೊಡೆದಂತಾಯಿತು ಪಾಂಡ್ಯಗೆ, “ಬಲಿಯನು ಕೊಡುವುದೆ ಯಾರನ್ನು? ಕಯ್ಯಾರೆ ಕಬಿತೆಲು / 43